Girl in a jacket

ರಾಮ ಮತ್ತು ಕಾಶಿ ವಿಶ್ವನಾಥನ ಬೆಳ್ಳಿ ವಿಗ್ರಹ ಮತ್ತು ಪ್ರಸಾದವನ್ನ ಮನೆ ಮನೆಗೆ ಹಂಚಿಕೆ-ಕಾಂತೇಶ್



ಸುದ್ದಿಲೈವ್/ಶಿವಮೊಗ್ಗ

ಒಂದು ಲಕ್ಷ ಅಯೋಧ್ಯ ರಾಮ ಮತ್ತು ಕಾಶಿ ವಿಶ್ವಾನಾಥನ ಬೆಳ್ಳಿ ಕೋಟೆಡ್ ವಿಗ್ರಹ ಮತ್ತು  ಪ್ರಸಾದವನ್ನ ಶಿವಮೊಗ್ಗದಲ್ಲಿ ಮನೆ ಮನೆಗೆ ಹಂಚಲಾಗುವುದು ಎಂದು ರಾಷ್ಟ್ರಭಕ್ತ ಬಳಗದ ಕೆ.ಈ.ಕಾಂತೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.2 ರಂದು ಸಂಜೆ 6 ಗಂಟೆಗೆ ವಿನೋಬ ನಗರದ ಶುಭಮಂಗಳದಲ್ಲಿ ಪ್ರವಾಸಕ್ಕೆ ಬಂದ ಭಕ್ತರ ಮೂಲಕ ಹಂಚಲಾಗುವುದು. ಡಿ.3 ರಿಂದ ವಾರ್ಡ್ ವಾರು ಮನೆ ಮನೆಗೆ ಹಂಚಲಾಗುವುದು. ಒಂದೇ ನಾಣ್ದಲ್ಲಿ ಒಂದೆಡೆ ರಾಮ ಮತ್ತೊಂದೆಡೆ ಕಾಶಿ ವಿಶ್ವನಾಥನ ವಿಗ್ರಹವಿರುತ್ತದೆ ಎಂದರು.

ನ.23 ರಂದು 1600 ಕ್ಕೂ ಹೆಚ್ಚು ಅಯೋದ್ಯ ಮತ್ತು ಕಾಶಿಗೆ ಯಾತ್ರೆ ಕರೆದುಕೊಂಡು ಹೋಗಿದ್ವಿ ನಿನ್ನೆ ವಾಪಾಸ್ ಆಗಿದ್ದೇವೆ. ಬೆಕ್ಕಿನಕಲ್ಮಠ ಶ್ರೀಗಳು ಸೇರಿದಂತೆ ಮೂವರು  ನಮಗೆ ಬೀಳ್ಕೊಟ್ಟಿದ್ದರು ಎಂದು ತಿಳಿಸಿದರು.

ನಮ್ಮ ಜೀವನ ಮತ್ತು ಜನ್ಮ ಸಾರ್ಥಕೆನಿಸಿದೆ. ಕಾಶಿ ವಿಶ್ವನಾಥ ಅಯೋಧ್ಯ ರಾಮನ ದರ್ಶನ ಮಾಡಿದ ನಂತರವೂ ನಮ್ಮನ್ನ‌ ಬಿಟ್ಟುಹೋಗಿದ್ದರ ಬಗ್ಗೆ ಜನ ಕೇಳಿದ್ದಾರೆ. ಆರ್ ಎಸ್ ಎಸ್ ನ ಗೋಪಿ ಅವರು ನಮಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಿದ್ದರು ಎಂದರು.

ದೆಹಲಿಯಲ್ಲಿದ್ದ ಕಾಶಿಯ ಜಗದ್ಗುರುಗಳು ವಾರಣಾಸಿಗೆ ಬಂದು ಆಶೀರ್ವದಿಸಿ ವಾಪಾಸ್ ಆದರು. ಕಾಶಿ ಪ್ರಸಾದ ಮತ್ತು ಅಯೋಧ್ಯ ಪ್ರಸಾದಕ್ಕೆ ಬೇಡಿಜೆ ಇದೆ. ಶಿವಮೊಗ್ಗದ ಪ್ರತಿ ಹಿಂದೂಗಳಿಗೆ ಹಂಚಲು ನಿರ್ಧರಿಸಲಾಗಿದೆ. 1 ಲಕ್ಷ ರಾಮನ ಬೆಳ್ಳಿ ಕಾಯಿನ್ ಮತ್ತು ಪ್ರಸಾದವನ್ನ ಡಿ.2 ರಂದು ಯಾತ್ರೆಗೆ ಬಂದ ಭಕ್ತರಿಗೆ ಹಂಚುವ ಮೂಲಕ ಕಾರಗಯಕ್ರಮಕ್ಕೆ ಚಾಲನೆ ನೀಡಲಾಹುವುದು.

ಬೆಕ್ಕಿನ ಕಲ್ಮಠದ ಶ್ರೀಗಳು ಬಿಳಕಿ ರಾಚೋಟಿ ಸ್ವಾಮಿಗಳು, ಬಸವಕೇಂದ್ರ ಶ್ರೀಗಳು, ರಾಮಕೃಷ್ಣ ಶ್ರೀಗಳು ಆರ್ ಎಸ್ ಎಸ್ ನ ಪಟ್ಟಾಭಿರಾಮ, ಮಾಜಿ ಡಿಸಿಎಂ ಈಶ್ವರಪ್ಪಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಡಿ.3 ರಿಂದ ವಾರ್ಡ್ ವಾರು ಹಂಚಲಾಗುತ್ತದೆ. ಇತರೆ ಸಮುದಾಯವು ಬಯಸಿದರೆ ಅವರಿಗೂ ಹಂಚಲಾಗುವುದು ಎಂದರು.

ಇನ್ನು ಒಂದು ವರೆ ವರ್ಷದ ನಂತರ ಮತ್ತೆ ಎರಡನೇ ಟ್ರಿಪ್ ನಡೆಸಲಿದ್ದೇವೆ. ಮೊದಲೇ ಗೊತ್ತಿದ್ದರೆ ಮತ್ತೊಂದು ವಿಶೇಷ ಯಾತ್ರೆ ನಡೆಯಲಿದೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close