ಸುದ್ದಿಲೈವ್/ಶಿವಮೊಗ್ಗ
ತುಳಸಿ ಹಬ್ಬಕ್ಕೆ ಗಾಂಧಿ ಬಜಾರ್ ಮತ್ತು ವೀರಶೇವ ಕಲ್ಯಾಣ ಮಂದಿರದ ರಸ್ತೆ ಮತ್ತು ಶಿವಪ್ಪ ನಾಯಕನ ವೃತ್ತದಲ್ಲಿ ಸಾರ್ವಜನಿಕರ ಖರೀದಿ ಜೋರಾಗಿದೆ.
ಉತ್ತಾನ ದ್ವಾದಶಿಯ ದಿನದಂದು ನಡೆಯುವ ನಾಳೆ ತುಳಸಿ ಹಬ್ಬಕ್ಕೆ ನೆಲ್ಲಿ ಗಿಡ ಶ್ರೇಷ್ಠವಾಗಿದೆ. ಮಾವಿನಸೊಪ್ಪು, ಹಣ್ಣಹಂಪಲು, ಬಾಳೆ ಕಂದು ಹೂವುಗಳ ಮಾರಾಟ ಮತ್ತು ಖರೀದಿ ಜೋರಾಗಿದೆ.
ನೆಲ್ಲಿಕಾಯಿ ಗಿಡಕ್ಕೆ 40-50 ರೂ ವರೆಗೆ ಮಾರಾಟವಾಗುತ್ತಿದೆ. ಮಾವಿನ ಸೊಪ್ಪ ಕಟ್ಟಿಗೆ 40 ರೂ. ಬಾಳೆಕಂದು ಜೋಡಿಗೆ 80 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಿಕ್ಸಡ್ ಹಣ್ಣು ಕೆಜಿಗೆ 100 ರೂ. ಮಾರಾಟವಾದರೆ ಸೇಬು 180 ರೂ ಮತ್ತು ಸೀಬೆಹಣ್ಣು ಕೆಜಿಗೆ 140-160 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಕಿತ್ತಲೆ ಹಣ್ಣಿಗೆ ಕೆಜಿಗೆ 50-80 ರೂ.ವಿದ್ದರೆ ಮೂಸುಂಬೆ ಹಣ್ಣು ಕೆಜಿಗೆ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಹೂವು ಹಣ್ಣು ಮತ್ತು ಬೆಟ್ಟದ ನೆಲ್ಲಿಕಾಯಿಯ ಮಾರಾಟದ ಭರಾಟೆ ಜೋರಾಗಿದೆ. ಸಂಜೆಯ ವೇಳೆಗೆ ಖರೀದಿಯ ಭರಾಟೆ ಹೆಚ್ಚಾಗುವ ಸಾಧ್ಯತೆ ಇದೆ.