ಸಾಂಧರ್ಭಿಕ ಚಿತ್ರ |
ಸುದ್ದಿಲೈವ್/ಶಿವಮೊಗ್ಗ
ಲೀಜ್ ಗೆ ಪಡೆದಿದ್ದ ಮನೆಯಲ್ಲಿ ಸಿಲಿಂಡರ್ ಸ್ಪೋಟದಿಂದ ಹಾನಿಉಂಟಾಗಿದ್ದು, ಪರಿಹಾರ ಪಡೆದ ಬ್ಯಾಂಕ್ ಮಹಿಳ ಉದ್ಯೋಗಿಯೊಬ್ಬರು ಮನೆಯ ಮಾಲೀಕರಿಗೆ ಲುಕ್ಸಾನ್ ಉಂಟುಮಾಡಿರುವುದಾಗಿ ಆರೋಪಿಸಿ ತುಂಗ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಗೋಪಾಳಗೌಡ ಬಡಾವಣೆಯ ಮನೆ ನಂ 87, ಮಂದಾರ ನಿಲಯ ಎ ಬ್ಲಾಕ್ 1 ನೆ ತಿರುವಿನಲ್ಲಿ ಭಾರತಿ ಎಂಬುವರು ಎರಡು ಅಂತಸ್ತಿನ ಮನೆ ಹೊಂದಿದ್ದು ಅದರಲ್ಲಿ ಮೇಲಿನ ಅಂತಸ್ತಿನ ಮನೆಯನ್ನು ದಿನಾಂಕ 17.03.2023 ರಂದು ಉಷಾ ಕೋಂ ಮಹಾದೇವ ಸ್ವಾಮಿ (42) ಎಂಬ ಯುನಿಯನ್ ಬ್ಯಾಂಕ್ ಉದ್ಯೋಗಿ ಇವರಿಗೆ ಲೀಜ್ ಗೆ 11 ತಿಂಗಳ ಅವಧಿಗೆ ನೀಡಿರುತ್ತಾರೆ.
ನಂತರ ದಿನಾಂಕ 17.02.20244 ರಂದು ಸದರಿ ಮನೆಯ ಲೀಜ್ ಅಗ್ರಿಮೆಂಟ್ ನ್ನು ಪುನಃ 11 ತಿಂಗಳ ಅವಧಿಗೆ ನವಿಕರಿಸಿಕೊಂಡಿದ್ದು, ದಿನಾಂಕ 28.02.2024 ರಂದು ಬೆಳಗ್ಗೆ ಸುಮಾರು 09.45 ಗಂಟೆಗೆ ಶ್ರೀಮತಿ ಉಷಾರವರು ಎಂದಿನಂತೆ ಕೆಲಸಕ್ಕೆ ಹೋಗಿದ್ದಾಗ ಬೆಳಗ್ಗೆ ಸುಮಾರು 10.30 ರ ವೇಳೆಗೆ ಉಷಾರವರ ಮನೆಯಲ್ಲಿರುವ ಹೆಚ್ ಪಿ ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡು ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳು ಗೋಡೆಗಳು ಆರ್ ಸಿ ಸಿ ಮತ್ತು ಮನೆಯ ವಸ್ತುಗಳು ಸುಟ್ಟು ಹಾನಿಯಾಗಿರುತ್ತವೆ.
ಇದರ ಅಂದಾಜು 13,00,000/- (ಹದಿಮೂರು ಲಕ್ಷ ರೂ) ಗಳಷ್ಟು ನಷ್ಟವಾಗಿರುತ್ತದೆ. ಇದಕ್ಕೆ ಸಂಬಂದಿಸಿದಂತೆ ಹೆಚ್ ಪಿ ಕಂಪನಿಯಿಂದ ಉಷಾರವರು ಪರಿಹಾರ ಪಡೆದಿದ್ದು, ಕರಾರು ಪತ್ರದಲ್ಲಿರುವಮತೆ ಅವರು ಮನೆಯನ್ನು ರಿಪೇರಿ ಸಹ ಮಾಡಿಸದೆ ನಮಗೆ ಮೋಸ ಮಾಡುವ ಉದ್ದೇಶದಿಂದ ಪರಿಹಾರದ ಹಣವನ್ನು ಪಡೆದುಕೊಡು ಮನೆ ಬಿಟ್ಟು ಹೊಗಿದ್ದಾರೆ ಎಂದು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.
ಮನೆಯನ್ನು ರಿಪೇರಿ ಮಾಡಿಸದೆ ಪರಿಹಾರದ ಹಣವನು ಪಡೆದುಕೊಂದು ಮನೆ ಬಿಟ್ಟು ಹೊಗಿರುವ ಉಷಾರವರ ಮೇಲೆ ಕಾನೂನು ಕ್ರಮಜರುಗಿಸಬೇಕೆಂದು ಭಾರತಿಯವರು ಕೋರಿದ್ದಾರೆ. ಆದರೆ ಅಗ್ರಿಮೆಂಟ್ ಅವಧಿ ಮುಗಿದಿದ್ದು ನಂತರ ಈ ಘಟನೆ ನಡೆದಿದ್ದರಿಂದ ಈ ಪ್ರಕರಣ ಹೇಗೆ ಇತ್ಯಾರ್ಥಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.