ಸುದ್ದಿಲೈವ್/ಶಿವಮೊಗ್ಗ
ನಗರದ ಸವಳಂಗ ರಸ್ತೆಯಲ್ಲಿರುವ ಆರಾಧನಾ ಆರ್ಥೋ ಪೆಡಿಕ್ ಆಸ್ಪತ್ರೆಯಲ್ಲಿ ರೋಬೋಟಿಕ್ ಮೂಳೆ ಕೀಲು ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ. ಇದುವರೆಗೂ 25 ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ. ಕೀಲು ಮೂಳೆ ಸವಕಲಿಗೆ ರೋಬೋಟಿಕ್ ಶಸ್ತ್ರ ಚಿಕಿತ್ಸೆ ಅನುಕೂಲವಾಗಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಆಸ್ಪತ್ರೆಯ ಆರ್ಥೋ ಸ್ಪೆಷಲಿಸ್ಟ್ ಡಾ.ಗಿರೀಶ್ ಮಾತನಾಡಿ, ಅಲೈನ್ ನೆಂಟ್, ಬ್ಯಾಲೆನ್ಸಿಂಗ್, ಇಪ್ಲಾಂಟ್ ಪೊಸಿಷನಿಂಗ್ ಗೆ ರೋಬೊಟಿಕ್ ಚಿಕಿತ್ಸೆಗೆ ಅನುಕೂಲವಾಗಲಿದೆ. ಚಲನವಲನ, ಫರ್ಫೆಟಕ್ಸ್ ಪೊಸಿಷನ್ ಗೆ ರೋಬೆಟಿಕ್ ಅನುಕೂಲವಾಗಲಿದೆ. ಇದರಿಂದ ಶೀಘ್ರ ಚೇತರಿಕೆ ಮತ್ತು ರಕ್ತಸ್ರಾವ ತಡೆಯಬಹುದಾಗಿದೆ ಎಂದರು.
ಬೆಂಗಳೂರು, ಮೈಸೂರು, ಬಿಟ್ಟರೆ ಶಿವಮೊಗ್ಗದ ಆರಾಧನ ಆರ್ಥೊಪೆಡಿಕ್ ಆಸ್ಪತ್ರೆಯಲ್ಲಿ ಮಾತ್ರ ಲಭ್ಯವಿದೆ. ಸರ್ಜನ್ ಗೆ ಆರ್ಟಿಫಿಷಲ್ ಇಂಟಲೆಜೆನ್ಸ್ ರೀತಿ ಈ ರೋಬೊಟ್ ಕೆಲಸ ಮಾಡಲಿದೆ. ಇದೇ ಖುದ್ದಾಗಿ ಕೆಲಸ ಮಾಡೊಲ್ಲ. ಈ ಚಿಕಿತ್ಸೆಗೆ 1.5 ಲಕ್ಷಕ್ಕೆ ಆಪರೇಷನ್ ನಡೆಯಲಿದೆ ಎಂದರು.
ಅಪಘಾತದಲ್ಲಿ ಮೂಳೆ ಮುರಿದರೆ ಅದಕ್ಕೆ ಬಳಕೆ ಆಗೊಲ್ಲ. ಎಲ್ಲಾ ಇನ್ಸುರೆನ್ಸ್ ಗೆ ಈ ಚಿಕಿತ್ಸೆ ಲಭ್ಯವಾಗಲಿದೆ. ಇಎಸ್ಐ ಈ ಬಗ್ಗೆ ಏನು ಮಾಡಲಿದೆ ಗೊತ್ತಿಲ್ಲ. ನ.17 ರಂದು ನಗರದ ಹರ್ಷಫರ್ನ್ ಹೋಟೆಲ್ ನಲ್ಲಿ ಜನತೆಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.