ಸಾಂಧರ್ಭಿಕ ಚಿತ್ರ |
ಸುದ್ದಿಲೈವ್/ಶಿವಮೊಗ್ಗ
ಫೈನಾನ್ಸ್ ನಲ್ಲಿ ಸೀಜ್ ಆಗಿದ್ದ ಜೆಸಿಬಿಯನ್ನ ಸಾಮಾಜಿಕ ಜಾಲತಾಣದಲ್ಲಿ ಮಾರಾಟಕ್ಕಿದೆ ಎಂದು ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಖರೀದಿಗೆ ಬಂದ ವ್ಯಕ್ತಿಯಿಂದ ಹಣ ಪಡೆದು ವಂಚಿಸಿದ ಘಟನೆ ಶಿವಮೊಗ್ಗದ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಯು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ನಿವಾಸಿ ರಿಯಾಜ್ ದೊಡ್ಡಬಾಬು ಬುಡ್ಡಣ್ಣನವರ್ ಎಂದು ಪತ್ತೆಹಚ್ಚಿರುವ ತುಂಗನಗರ ಪೊಲೀಸರು ನಿನ್ನೆ ಬಂದಿಸಿದ್ದಾರೆ. ಈತ ಮೆಕಾನಿಕಲ್ ಇಂಜಿನಿಯರ್ ಆಗಿರುವುದಾಗಿ ತಿಳಿದು ಬಂದಿದೆ.
ಶಿವಮೊಗ್ಗದ ಮತ್ತೂರಿನ ನಿವಾಸಿ ಹುಸೇನ್ ಸಾಬ್ ಎಂಬುವರು ಜೆ.ಸಿ.ಬಿ ಆಪರೇಟರ್ ಕೆಲಸ ಮಾಡಿಕೊಂಡಿದ್ದು, ರಿಯಾಜ್ ದೊಡ್ಡಬಾಬು ಬುಡ್ಡಣ್ಣನವರು ಎಂಬ ವ್ಯಕ್ತಿಯು ಶಿವಮೊಗ್ಗ ಊರುಗಡೂರು ಹತ್ತಿರ ಇರುವ ಪಟೇಲ್ ಕಾಂಪೌಂಡ್ ಎಂಬ ಸ್ಥಳದಲ್ಲಿ JCB 3DX4-2021 ನೇ ಮಾಡೆಲ್ ಹಿಂದುಜಾ ಪೈನಾನ್ಸ್ ನಲ್ಲಿ ಸೀಜಾದ ಜೆ.ಸಿ.ಬಿ ವಾಹನ ಸಂಖ್ಯೆ- KA-17-MK-4935 ಇದ್ದು, ಹಿಂದುಜಾ ಪೈನಾಸ್ ನಲ್ಲಿ.. ಬಿಡ್ ತೆಗೆದುಕೊಂಡಿರುವುದಾಗಿ ನಂಬಿಸಿ ಹಾಗೂ ಅದರ ಸಂಪೂರ್ಣ ಜವಬ್ದಾರಿ ತಾನೇ ತೆಗೆದುಕೊಳ್ಳುತ್ತೇನೆ ಎಂದು ನಂಬಿಸಿದ್ದಾನೆ.
ಜುಲೈ 12 ರಂದು ಮಧ್ಯಾಹ್ನ 12-45 ಗಂಟೆಯ ಸಮಯದಲ್ಲಿ ಶಿವಮೊಗ್ಗ, ಪಟೇಲ್ ಕಾಂಪೌಂಡ್ ಗೆ ಹುಸೇನ್ ಸಾಬ್ ರನ್ನ ಕರೆಯಿಸಿಕೊಂಡ ರಿಯಾಜ್ ಜೆ.ಸಿ.ಬಿ ವಾಹನವನ್ನು ಹಾಗೂ ಅವರ ದಾಖಲಾತಿಗಳನ್ನು ತೋರಿಸಿ ನಂಬಿಕೆ ಬರುವಂತೆ ಮಾಡಿ ಮುಂಗಡವಾಗಿ ಫೊನ್ ಪೇ ಮಾಡಿಸಿಕೊಂಡಿದ್ದಾನೆ. ಜು.5 ರಂದು ಸಂಜೆ 5-00 ಗಂಟೆಗೆ ಶಿವಮೊಗ್ಗ ಕೋರ್ಟ ಮುಂಭಾಗಕ್ಕೆ ಮತ್ತೆ ಹುಸೇನ್ ಸಾಬ್ ರನ್ನ ಕರೆಯಿಸಿಕೊಂಡು ಜೆ.ಸಿ.ಬಿ ಯನ್ನು ಕಡಿಮೆ ಬೆಲೆಗೆ ಅಂದರೆ 21 ಲಕ್ಷಕ್ಕೆ ಮಾಡಿಸಿಕೊಡುತ್ತೇನೆಂದು ನಂಬಿಸಿ ಅದಕ್ಕೆ ಸಂಬಂದಿಸಿದಂತೆ ಒಂದು ಶುದ್ದಕ್ರಯ ಪತ್ರ ಮಾಡಿಸಿಕೊಂಡಿದ್ದಾನೆ.
ಕ್ರಯ ಪತ್ರದಲ್ಲಿ, ಜೆ.ಸಿ.ಬಿ ಗೆ ವಾಹನಕ್ಕೆ 21 ಲಕ್ಷ ರೂ ನಿಗದಿ ಮಾಡಿ ಅದರಂತೆ ಮುಂಗಡವಾಗಿ 2 ಲಕ್ಷ ಹಣವನ್ನು ಕೈಗಡವಾಗಿ ಪಡೆದು, ಉಳಿದ 19 ಲಕ್ಷ ಹಣಕ್ಕೆ ಹುಸೇನ್ ಸಾಬ್ ರ ಹೆಸರಿನಲ್ಲಿ ಹಿಂದುಜಾ ಪೈನಾನ್ಸ್ ನಲ್ಲಿ ಲೋನ್ ಮಾಡಿಸಿ ಕೊಡಿಸುತ್ತೇನೆಂದು ಉಲ್ಲೇಖಿಸಿದ್ದಾರೆ. ನಂತರ ಜೆ.ಸಿ.ಬಿ ವಾಹನಕ್ಕೆ 8 ದಿನಗಳಲ್ಲಿ ಸಿಸಿ ಕೊಡಲು ಬದ್ಧನಾಗಿರುತ್ತೇನೆ ಎಂದಿದ್ದ ರಿಯಾಜ್ ನಂತರ ಮತ್ತೆ ಹುಸೇನ್ ಸಾಬ್ ರಿಗೆ ಪೋನ್ ಮಾಡಿ ಜೆ.ಸಿ.ಬಿ ವಾಹನಕ್ಕೆ ಸಿಸಿ ತೆಗೆಸಲು 40,000/- ಬೇಕು ಎಂದು ಕೇಳಿದ್ದಾನೆ. ರಿಯಾಜ್ ದೊಡ್ಡಬಾಬು ಬುಡ್ಡಣ್ಣನವರ್
ಇದಕ್ಕೂ ತಕರಾರು ಎತ್ತದ ಹುಸೇನ್ ಸಾಬ್ ರು ಫೋನ್ ಪೇ ಮೂಲಕ 40 ಸಾವಿರ ರೂ. ವರ್ಗಾಯಿಸಿದ್ದಾರೆ. ನಂತರ ರಿಯಾಜ್ ನ್ನ ಸಂಪರ್ಕಿಸಲು ಯತ್ನಿಸಿದಾಗ ಆತನ ಪೋನ್ ಸ್ವಚ್ ಆಫ್ ಆಗಿದ್ದ ಕಾರಣ ಪಿರಾದಿಯು ಅನುಮಾನಗೊಂಡು ಶಿವಮೊಗ್ಗ ಹಿಂದೂಜಾ ಪೈನಾನ್ಸ್ ಗೆ ಬೇಟಿ ನೀಡಿ ವಿಚಾರ ಮಾಡಿದ್ದಾರೆ.
ಪೈನಾನ್ಸ್ ಗೂ ರಿಯಾಜ್ ನಿಗೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಫೈನಾನ್ಸ್ ನವರು ತಿಳಿಸಿದ್ದಾರೆ. ಜೆ.ಸಿ.ಬಿ ಕೊಡಿಸುವುದಾಗಿ ನಂಬಿಸಿ 2,60,000/- ರೂ ಹಣವನ್ನು ಪಡೆದು ಮೋಸ ಮಾಡಿದ ರಿಯಾಜ್ ದೊಡ್ಡಬಾಬು ಬುಡ್ಡಣ್ಣನವರ್ ಈತನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಹುಸೇನ್ ಸಾಬ್ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನಬಂಧಿಸಿದ್ದಾರೆ.