Girl in a jacket

ವಿಜೇಂದ್ರಗೆ ಬಸ್ ಸ್ಟ್ಯಾಂಡ್ ಪಕ್ಕ ಚೇರ್ ಹಾಕಿಕೊಡಬೇಕು-ಮಧು ಬಂಗಾರಪ್ಪ


ಸುದ್ದಿಲೈವ್/ಶಿವಮೊಗ್ಗ

ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಾಗಲೋಟ ಮುಂದು ವರೆಸುತ್ತಿದ್ದಂತೆ ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು, ರಾಜ್ಯದ ಜನ ಕಾಂಗ್ರೆಸ್ ಸರ್ಕಾರದ ಮೇಲೆ ವಿಶ್ವಾಸವನ್ನಿಟ್ಟಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ಕ್ಷೇತ್ರದಲ್ಲಿ ಮನೆ ಮನೆಗೆ ಹೋಗಿ ಮತ ಕೇಳಿದ್ದಾರೆ. ಇದರ ಪರಿಣಾಮ ಗೆಲವಾಗಿದೆ. ಮತದಾರರು ವಿಪಕ್ಷಗಳ ಸ್ಥಾನ ತೋರಿಸೊದ್ದಾರೆ. ಸಿಎಂಗೆ ಅಗೌರವ ತೋರಲಾಗಿತ್ತು. ಮತದಾರ ತಕ್ಕ ಪಾಠ ತೋರಿದ್ದಾನೆ ಎಂದರು.

ಹಿಂದುಳಿದ ವರ್ಗಗಳ ರಾಜ್ಯದ ಅಧ್ಯಕ್ಷರಾಗಿ ನನಗೆ ಸವಣೂರಿನ ಉಸ್ತುವಾರಿಯಾಗಿತ್ತು.  ತಿಳುವಳ್ಳಿ ಕ್ಷೇತ್ರದಲ್ಲಿ ಪಕ್ಷ ಸೇರ್ಪಡೆಗೂ ಮುನ್ನ ಹೋಗಿದ್ದೆ. ಶಿಗ್ಗಾಂವ್ ನಲ್ಲಿ ಉತ್ತಮ ಕೆಲಸ ಮಾಡಿದ್ವಿ. ಸರ್ಕಾರದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಿದ್ದೇವೆ ಎಂದರು. 

ಚನ್ನಪಟ್ಟಣದಲ್ಲಿ ಪ್ರಜಾಪ್ರಭುತ್ವದ ಗೂಡಿಸುವ ಕೆಲಸ ಮಾಡಲಾಗಿದೆ. ಯೋಗೀಶ್ವರ್ ಸ್ಥಳೀಯರಾಗಿದ್ದಾರೆ. ಪಕ್ಷಗಳನ್ನ ಬದಲಿಸಿರಬಹುದು. ಪಕ್ಷ ಬದಲಿಸುವಲ್ಲಿ ಚಾಂಪಿಯನ್ ಎಂದರೆ ನಮ್ಮ‌ತಂದೆ ಅವರು ಎಂದರು. 

ಆಶ್ರಯ ಆರಾಧನ ಬಗ್ಗೆ ಚನ್ನ ಪಟ್ಟಣದ ಜನ‌ನೆನಪಿಸಿಕೊಳ್ಳುತ್ತಾರೆ. ಸಂಡೂರುಗೆ ಹೋಗಿರಲಿಲ್ಲ ಆದರೆ ಗೆಲವಾಗ್ತಾಗಿದೆ. ಅಭ್ಯರ್ಥಿ ಮತ್ತು ಜನ ನಮ್ಮ ಜೊತೆಗೆ ಇದ್ದಾರೆ ಎಂದರು. 

ಯತ್ನಾಳ್  ಗೂ ಶುಭಾಶಯ ತಿಳಿಸುವೆ. ಅವರು ವಿಜೇಂದ್ರರಿಗೆ ಸ್ಥಾನ ತೋರಿದ್ದಾರೆ. ಯತ್ನಾಳ್ ಬಿಜೆಪಿಯಲ್ಲಿದ್ದು ನಮ್ಮ ಸಿಎಂ ಬದಲಾವಣೆಯ ಬಗ್ಗೆ ದಿನಾಂಕ ಹೇಳ್ತಾ ಇದ್ದರು. ಆದರೆ ಇದು ಅವರ ಪಕ್ಷದ ವಿಜೇಂದ್ರ ಅವರ ಬದಲಾವಣೆಯ ಕಾಲ ತಿಳಿಸಿದ್ದಾರೆ ಎಂದು ವ್ಯಂಗ್ಯವಾಡಿದರು‌.

ಫಲಿತಾಂಶ ಕೆಲವೊಂದು ವೇಳೆ ಹೆಚ್ಚುಕಡಿಮೆ ಆಗ್ತಾವೆ. ನಾವು ನಮ್ಮ ಕೆಲಸದ ಮೇಲೆ ಜನರ ಬಳಿ ಹೋದ್ವಿ ಹಾಗಾಗಿ ಫಲಿತಾಂಶ ನಮ್ಮ ಪರ ಬಂದಿದೆ. ಕಸ್ತೂರಿ ರಂಗನ್ ವರದಿ ಪರ ಕಳೆದ ಕ್ಯಾಬಿನೆಟ್ ನಲ್ಲಿ  ಸೂಕ್ತ ಕ್ರಮ ಜರುಗಿಸಲಾಗಿದೆ. 40 ವರ್ಷದ ಹೋರಾಟವಾಗುತ್ತದೆ. 

ಮುಖ್ಯ ಕಾರ್ಯದರ್ಶಿಯನ್ನ ಕೂರಿಸಿಕೊಂಡು ನಿರ್ಧರಿಸಲಾಗಿದೆ. ಶಿವಮೊಗ್ಗದಲ್ಲಿ ಸಮಸ್ಯೆ ಬಗೆಹರಿದರೆ ಬಹುತೇಕ ಸಮಸ್ಯೆ ಬಗೆಹರಿಯಲಿದೆ. ಅಧಿವೇಶನ ಆರಂಭವಾಗುವ ಮುನ್ನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿರುವುದರಿಂದ ಅವರಿಗೆ ವಕೀಲರನ್ನೂ ನೇಮಿಸಲಾಗುತ್ತಿದೆ. ಪಕ್ಷಾತೀತವಾಗಿ ಕೆಲಸವಾಗುತ್ತಿದೆ. ಮೂರು ತಿಂಗಳು ನಾನು ಶೇಕ್ ಆಗ್ತಾ ಇದೆ ಅಂತ ಹೆದರಿದ್ದೆ. ಈಗ ಸರಿಯಾಗಿದೆ ಎಂದರು. 

ರಾಜ್ಯ ಸರ್ಕಾರದ ಸಮಸ್ಯೆಯನ್ನ ನಾವು ಬಗೆಹರಿಸುತ್ತೇವೆ. ಕೇಂದ್ರ ಸರ್ಕಾರದ ಸಮಸ್ಯೆಯನ್ನ ಬಿಜೆಪಿಯವರು ಬಗೆಹರಿಸಬೇಕೆಂದರು. ಯಾವ ರೈತರಿಗೆ ನೋಟೀಸ್ ಕೊಟ್ಟರು ನಾವು ಜವಬ್ದಾರಿ ಆಗುತ್ತೇವೆ. ನೋಟೀಸ್ ಕೊಡುವುದು ಕಡಿಮೆಯಾಗಿದೆ. ಭೂಮಿ ಕಳೆದುಕೊಳ್ಳುವವರಿಗೆ ನ್ಯಾಯ ಕೊಡಿಸುತ್ತೇವೆ ಎಂದರು.

ಖಜಾನೆ ಖಾಲಿ, ವಕ್ಫ್, ಮೂಡ ವಿಚಾರವನ್ನ ಬಿಜೆಪಿ ಪ್ರಸ್ತಾಪಿಸಿತು‌ ನಮ್ಮ ದೇಶದಲ್ಲಿ ಕಾನೂನಿದೆ. ಕಾನೂನು ಗೆದ್ದಿದೆ. ಶಿವಮೊಗ್ಗದ ಬಸ್ ಸ್ಟ್ಯಾಂಡ್ ನಲ್ಲಿ ಜಾಗ ಖಾಲಿ ಇದೆ. ಅಲ್ಲಿ ಚೇರ್ ಹಾಕಿಕೊಡೋಣ, ಸರ್ಕಾರದ ಭವಿಷ್ಯ ಹೇಳ್ತಾ ಹೋಗಪ್ಪ ಎನ್ನೋಣ. ಸರ್ಕಾರದ ಕಾರ್ಯಕ್ರಮ, ವಿಶ್ವಾಸ ಉಪಚುನಾವಣೆಯಲ್ಲಿ ಗೆದ್ದಿದೆ. 

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಪವಿತ್ರ ಮೈತ್ರಿಯಾಗಿದೆ. ಎಸ್ ಟಿ ಸೋಮಶೇಖರ್ ಯತ್ನಾಳ್ ಯಾಕೆ ತಮ್ಮ ಪಕ್ಷ ಬಿಟ್ಟು ಕಾಂಗ್ರೆಸ್ ನ್ನ ಹೊಗಳುತ್ತಿದ್ದಾರೆ ನೋಡಿ. ಮಬೆಮನೆಗೆ ಹಣಕೊಡುವುದು ಅಭಿವೃದ್ಧಿ ಅಲ್ವಾ? ಗ್ಯಾರೆಂಟಿಗೆ ಯಾರಹತ್ತರನಾದರೂ ಕಮಿಷನ್ ಪಡೆದಿದ್ವಾ? ಬಸ್ ಗಳನ್ನ ಪಡೆಯಲಿಲ್ಲ. ಬಿಜೆಪಿ ಸರ್ಕಾರ ಘೋಷಣೆ ಕೂಗ್ತು. ಆದರೆ ಬಸ್ ಬರಲೇ ಇಲ್ಲ. ನಾವು ಖರೀದಿಸ್ವಿ.‌ ನಮ್ಮ ಇಲಾಖೆಯಲ್ಲಿ 9 ತಿಂಗಳಲ್ಲಿ 13 ಸಾವಿರ ಶಿಕ್ಷಕರನ್ನ ನೇಮಕಾತಿ ಮಾಡುದ್ವಿ ಇವೆಲ್ಲ ಅಭಿವೃದ್ಧಿ ಅಲ್ವಾ ಎಂದರು. 

ಸೊರಬದ ಮಾಜಿ ಶಾಸಕರು ರಸ್ತೆ ಬಗ್ಗೆ ಮಾತನಾಡಿದ್ರು. ಆಗ ಹಣನೇ ಇಟ್ಟಿರಲಿಲ್ಲ. ಈಗ ಸಿದ್ದರಾಮಯ್ಯ ಹೇಗೆ ಹಣ ಕೊಟ್ಟುಎಂದು ಪ್ರಶ್ನಿಸಿದರು. ವಿವೇಕಾ ಯೋಜನೆ ಅಡಿಯಲ್ಲಿ 8800 ರೂಮ್ ಗಳನ್ನ ನೀಡಲಾಗಿತ್ತು. 3300 ಕೋಟಿ ಕೊಡಲಾಗಿತ್ತು. ಉಳಿದ ಹಣವನ್ನ ನಾವು ಕೊಟ್ಟಿದ್ದೇವೆ.  37000 ಕೋಟಿ ಬಿಜೆಪಿ ಸಾಲವನ್ನ ನಾವು ತೀರುಸಿತ್ತಿದ್ದೀವಿ ಎಂದರು. 

ಕನ್ನಡ ಬರೊಲ್ಲ ಕನ್ನಡ ಬರೊಲ್ಲ ಎಂದು ಟ್ರೋಲ್ ಮಾಡುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಧುಬಂಗಾರಪ್ಪ ಯಾವ ಲ್ಯಾಂಗ್ವೇಜ್ ನಲ್ಲಿ ಚುನಾವಣೆ ಮಾಡಿ ಗೆದ್ದಿದ್ದೀವಿ? ಕನ್ನಡ ಬರೊಲ್ಲ ಎಂಬ  ಮಗುವಿನ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಹೇಳೇ ಇಲ್ಲ  ಎಂದು ಸ್ಪಷ್ಟಪಡಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close