Girl in a jacket

ಜಾನಪದ ಜಾತ್ರೆಗೆ ಅದ್ದೂರಿಯ ತೆರೆ


ಸುದ್ದಿಲೈವ್/ಶಿವಮೊಗ್ಗ

ಅನವರತ ತಂಡದಿಂದ ಆಯೋಜಿಸಲಾಗಿದ್ದ "ಸಿಹಿಮೊಗೆ ಸಂಭ್ರಮ-01"ರ ಭಾಗವಾಗಿ ನಡೆದ "ಜಾನಪದ ಜಾತ್ರೆ" ಅತ್ಯಂತ ಅದ್ದೂರಿ ತೆರೆ ಬಿದ್ದಿದೆ. 

ನಿನ್ನೆ ಸಂಜೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಅನೇಕ ಕಾಲೇಜಿನ ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಜನಪದ ನೃತ್ಯದಿಂದ 16 ತಂಡಗಳು, ಜನಪದ ಗಾಯನದಿಂದ 17 ತಂಡಗಳು, ಚಿತ್ರಕಲಾ ಸ್ಪರ್ಧೆಗೆ ವೈಯಕ್ತಿಕವಾಗಿ 36 ಹಾಗೂ ಛಾಯಾಗ್ರಹಣ ಸ್ಪರ್ಧೆಗೆ 17 ಸದಸ್ಯರು ಸೇರಿ ಒಟ್ಟಾರೆ 350ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದ್ದಾರೆ.

ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತಾ, ಈ ಜನಪದ ಕಲರವ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತು, ಈ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾರಣರಾದ ಪ್ರತಿಯೊಬ್ಬರಿಗೂ ಶಾಸಕ ಚೆನ್ನಬಸಪ್ಪ ಧನ್ಯವಾದ ಸಲ್ಲಿಸುತ್ತೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close