Girl in a jacket

ಬಳ್ಳಿಗಾವಿಯ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠದ ಪೀಠಾಧಿಪತಿಗಳು ನಿಧನ



ಸುದ್ದಿಲೈವ್/ಶಿವಮೊಗ್ಗ

ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠದ ಪೀಠಾಧಿಪತಿಗಳಾದ ಶಿವಲಿಂಗೇಶ್ವರ ಸ್ವಾಮೀಜಿ ಅವರು ಇಂದು ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಲಿಂಗೈಕ್ಯರಾಗಿದ್ದಾರೆ.

ಅನಾರೋಗ್ಯದ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಶ್ರೀಗಳು ದಾಖಲಾಗಿದ್ದರು. ಇಂದು ಶ್ರೀಗಳು ನಿಧನರಾಗಿದ್ದಾರೆ. ಶ್ರೀಗಳು ಸೊರಬ ತಾಲೂಕಿನ ಗೆರಕೊಪ್ಪ ಬೆಪ್ಪಗೊಂಡನಕೊಪ್ಪ ಇಂಧೂಧರೇಶ್ವರ ಮಠ,

ಶಿಕಾರಿಪುರದ ಬಳ್ಳಿಗಾಮಿಯ ಅಲ್ಲಮ ಪ್ರಭು ಅನುಭಾವ ಪೀಠ ವಿರಕ್ತಮಠ, ಬೀದರ್ ಜಿಲ್ಲೆಯ ಬಸವಕಲ್ಯಾಣ ಕೆಳಗಿ ಮಠದ ಪೀಠಾಧಿಪತಿಗಳಾಗಿದ್ದರು. ಬಳ್ಳಿಗಾವಿಯಲ್ಲಿ ನಶಿಸಿಹೋಗುತ್ತಿದ್ದ ಅಲ್ಲಮನ ಮನೆಯನ್ನ ಅನುಭವ ಮಂಟಪವನ್ನಾಗಿ ಮಾಡಲು ಸಿದ್ಧತೆ ನಡೆಸಿದ್ದರು. 

ಶ್ರೀಗಳ ನಿಧನಕ್ಕೆ ಸಂಸದ ರಾಘವೇಂದ್ರ ಸಂತಾಪ ಸೂಚಿಸಿದ್ದಾರೆ. ಶ್ರೀಗಳು ಗ್ರಂಥ ಪ್ರಕಟಣೆಯ ಮೂಲಕ ವಚನಗಳ ಸಂರಕ್ಷಣೆಗೆ ಮುಂದಾಗಿದ್ದರು.ಅವರ ನಿಧನದಿಂದ ಅಪಾರ ಭಕ್ತವೃಂದ ನೋವಿನಲ್ಲಿ ಮುಳುಗಿದ್ದು ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಸಂಸದರು ಪ್ರಾರ್ಥಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close