Girl in a jacket

ನಿನ್ನೆ ಪ್ರತಿಭಟನೆ, ಇಂದು ಎತ್ತಂಗಡಿ



ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಇ-ಸ್ವತ್ತು ವಿಚಾರದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಉಪ ಆಯುಕ್ತರ ತೆರವಿಗೆ ಪ್ರತಿಭಟಿಸಿತ್ತು. ಇವತ್ತು ಆ ಉಪ ಆಯುಕ್ತರನ್ನ ಎತ್ತಂಗಡಿ ಮಾಡಿ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ. ಅಲ್ಲಿಗೆ ಯುವ ಕಾಂಗ್ರೆಸ್ ನ ಹೋರಾಟದ ಫಲಶೃತಿಗೊಂಡಿದೆ. 

ಯುವ ಕಾಂಗ್ರೆಸ್ ನ ಹೋರಾಟದ ಫಲಶ್ರುತಿ ಹಿನ್ನಲೆಯಲ್ಲಿ  ಇ -ಆಸ್ತಿ ಮಾಡಲು  ಲಂಚಕ್ಕೆ ಬೇಡಿಕೆ ಇಟ್ಟ ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತರಾದ ಮಂಜುನಾಥ್ ರನ್ನ ತೆರವುಗೊಳಿಸಿ ಅವರ ಸ್ಥಾನಕ್ಕೆ ಎಂ ಪೂಜಾರಿಯವರನ್ನ ನೇಮಿಸಿ ಆಯುಕ್ತರು ಆದೇಶಿಸಿದ್ದಾರೆ.‌

ನಿನ್ನೆ ದಿವಸ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಇ -ಆಸ್ತಿ ವಿಚಾರವಾಗಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಅಧಿಕಾರಿಯ ವಿರುದ್ಧ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ತತ್ತಕ್ಷಣವೇ ಪಾಲಿಕೆಯ ಆಯುಕ್ತರು ಎಚ್ಚೆತ್ತು ಕಂದಾಯ ವಿಭಾಗದ ಉಪ ಆಯುಕ್ತ ರನ್ನು ತೆರವು ಮಾಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close