ಸುದ್ದಿಲೈವ್/ಭದ್ರಾವತಿ
ಜನಪ್ರತಿನಿಧಿಯ ಪತ್ನಿಗೆ ಹುಬ್ಬೇರಿಸಿದ ವಿಚಾರದಲ್ಲಿ ಮಾರಾಮಾರಿ ನಡೆದಿದ್ದು ಹೊಳೆಹೊನ್ನೂರು ಸಾರ್ವಜನಿಕ ಆಸ್ಪತ್ರೆಗೆ ಇಬ್ವರೂ ದಾಖಲಾಗಿದ್ದಾರೆ.
ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ದಾಸರಕಲ್ಲಹಳ್ಳಿಯಲ್ಲಿ ಜನಪ್ರತಿನಿಧಿ ಕೇಶವ ಎಂಬುವರ ಪತ್ನಿಗೆ ಅದೇ ಗ್ರಾಮದ ವ್ಯಕ್ತಿಯೋರ್ವ ಹುಬ್ಬೇರಿಸಿದ ಕಾರಣ ಮಾರಾಮಾರಿ ನಡೆದಿದೆ. ಹುಬ್ವೇರಿಸಿದ ವ್ಯಕ್ತಿ ಅನ್ಯ ಕೋಮಿಗೆ ಸೇರಿದವನು ಎಂದು ಹೇಳಲಾಗುತ್ತಿದೆ.
ಕೇಶವ ಎಂಬುವರಿಗೆ ತೀವ್ರ ಗಾಯಗಳಾಗಿದ್ದು ಅವರನ್ನ ಹೊಳೆಹೊನ್ನೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದಾಖಲಿಸಲಾಗಿದೆ.