Girl in a jacket

ಲವ್ ಮಾಡುತ್ತಿದ್ದ ಯುವತಿ ಹಿಂದೆ ಸರಿದ ಪರಿಣಾಮ ರೊಚ್ಚಿಗೆದ್ದ ಯುವಕನ ಬೆದರಿಕೆ ಏನು ಗೊತ್ತಾ?


ಸುದ್ದಿಲೈವ್/ತೀರ್ಥಹಳ್ಳಿ

ಹನಿಟ್ರ್ಯಾಪ್ ಎಂದು ಕರೆದುಕೊಂಡ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣವೊಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾನಾಜಿಕ ಜಾಲತಾಣದಲ್ಲಿ ಪರಿಚಯವಾದ ಹದಿಹರೆಯದವರಿಬ್ಬರ ನಡುವೆ ಬೆಳೆದ ಪ್ರೀತಿ ಸಧ್ಯಕ್ಕೆ ಠಾಣೆ ಮೆಟ್ಟಿಲೇರಿದೆ. 

ಇನ್ ಸ್ಟಾಗ್ರಾಮ್ ನಲ್ಲಿ ಮೂರುವರ್ಷದ ಹಿಂದೆ ಬೆಂಗಳೂರಿನ ರಾಮನಗರದ ಯುವಕನೊಂದಿಗೆ ತೀರ್ಥಹಳ್ಳಿಯ ಯುವತಿಗೆ ಪರಿಚಯವಾಗಿ ಪರಿಚಯ  ಲವ್ ಆಗಿ ಪರಿವರ್ತನೆಗೊಂಡಿರುತ್ತದೆ. ಯಾವಾಗ ಲವ್ ಮನೆಯಲ್ಲಿ ಗೊತ್ತಾಗುತ್ತದೆಯೋ ಆಗ ಯುವತಿಯ ಮನೆಯವರು ಅಕ್ಷೆಪಿಸಿದ್ದಾರೆ. 

ಮನೆಯವರ ಅಕ್ಷೆಪಣೆಯಿಂದ ಹಿಂದೆ ಸರಿದ ಯುವತಿಗೆ ಯುವಕ ಅನೇಕ ಬಾರಿ ಸಂಪರ್ಕಿಸಲು ಯತ್ನಿಸಿದ್ದಾನೆ. ಯುವತಿ ಹಿಂದೆ ಸರಿದ ಪರಿಣಾಮ ಯುವಕ ಸೇಡಿಗೆ ನಿಂತ್ಬುಡ್ತಾನೆ.  ಯುವತಿ ಸಲುಗೆಯಿಂದ ಇದ್ದಾಗ ತೆಗೆದ ಫೊಟೊಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ. 

ಅಷ್ಟಕ್ಕೂ ನಿಲ್ಲದ ಆತನ ಆಕ್ರೋಶ, ಆಕೆಯ ಬೆತ್ತಲೆಫೊಟೊಗಳನ್ನ ಸಹ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಒಡ್ಡಿದ್ದಾನೆ. ಯುವಕನಿಗೆ ಬುದ್ದಿವಾದ ಹೇಳಲು ಬಂದ ಯುವತಿಯ ಕುಟುಂಬಸ್ಥರಿಗೂ ಅವ್ಯಚ್ಯ ಶಬ್ದಗಳಿಂದ ಬೈದಿದ್ದಾನೆ. ಕೊಲೆ ಬೆದರಿಕೆ ಸಹ ಹಾಕಿರುವುದಾಗಿ ಯುವತಿ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close