ಸುದ್ದಿಲೈವ್/ಶಿವಮೊಗ್ಗ
ನ.23 ರಂದು ನಡೆದ ರಾಜ್ಯದ ಉಪಚುನಾವಣೆ ಫಲಿತಾಂಶ ಮೂರು ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ. ಒಂದು ಪಕ್ಷಕ್ಕೆ ಆತ್ಮ ವಿಶ್ವಾಸ ಹೆಚ್ಚಿಸಿದರೆ, ಇನ್ನೆರಡು ಪಕ್ಷಗಳಲ್ಲಿ ಆತಂರಿಕ ಭಿನ್ನಾಭಿಪ್ರಾಯವನ್ನ ಹೊರಹಾಕಿದೆ. ಅದರಂತೆ ಶಿಕಾರಿಪುರದಲ್ಲೊಂದು ಅಪರಾಧ ಪ್ರಕರಣಕ್ಕೆ ಕಾರಣವೂ ಆಗಿದೆ.
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಅಪರಾಧ ಪ್ರಕರಣ ದೂರು ಮತ್ತು ಪ್ರತಿದೂರಿಗೆ ಕಾರಣವಾಗಿದೆ. ಮಲ್ಲೇನಹಳ್ಳಿಯಲ್ಲಿ ಪ್ರಶಾಂತ್ ಎಂಬುವರು 6 ತಿಂಗಳು ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ಈ ಬಗ್ಗೆ ಅದೇ ಗ್ರಾಮದ ಹಿರೇಗೌಡರಿಗೆ ಸಿಟ್ಟಿತ್ತು.
ಯಾವಾಗ ನ.23 ರಂದು ಕಾಂಗ್ರೆಸ್ ಮೂರು ಉಪಚುನಾವಣೆಯಲ್ಲಿ ಗೆದ್ದು ಬೀಗಿತೋ ಗ್ರಾಮದಲ್ಲಿ ಸಂಭ್ರಮಾಚರಣೆ ನಡೆಸಲು ಬೆಂಬಲಿಗರು ಮುಂದಾಗಿದ್ದಾರೆ. ಸಂಭ್ರಮಾಚರಣೆ ನಡೆಯುತ್ತಿದ್ದ ಅಣತಿ ದೂರದಲ್ಲಿ ಪ್ರಶಾಂತ್ ನಿಂತಿದ್ದನ್ನ ನೋಡಿ ಹಿರೇಗೌಡರ ಕಲಗಲು ಬೀಸಿದ್ದಾರೆ ಮತ್ತು ಮತ್ತೊಮ್ನೆ ಕಂಡರೆ ಜೀವ ಸಹಿತ ಬಿಡುವಿದಿಲ್ಲ ಎಂಬ ಬೆದರಿಕೆ ಹಾಕಿರುವುದಾಗಿ ಪ್ರತಿದೂರು ದಾಖಲಿಸಿದ್ದಾರೆ.
ಅದರಂತೆ ಹಿರೇಗೌಡರು ದೂರು ದಾಖಲಿಸಿದ್ದಾರೆ. ಸಂತೋಷ್ ಶಿರಹಳ್ಳಿ ಜೊತೆ ಹಿರೇಗೌಡರು ಸಂಭ್ರಮಾಚರಣೆಗೆ ಪಟಾಕಿ ಸಿಡಿಸಲು ಮುಂದಾಗಿದ್ದು ಪ್ರಶಾಂತ್ ಅವರ ಟ್ರ್ಯಾಕ್ಟರ್ ನಿಂತಿತ್ತು.ಅದನ್ನ ತೆಗೆಯಿರಿ ಎಂದು ಹೇಳಿದ್ದಕ್ಕೆ ತೆಗೆಯಲು ಆಗೊಲ್ಲವೆಂದು ಪ್ರಶಾಂತ್ ಹಿರೇಗೌಡರ ಎದೆಗೆ ಮತ್ತು ಕುತ್ತಿಗೆಗೆ ಚಾಕುವಿನಿಂದ ಗಾಯ ಮಾಡಿರುವುದಾಗಿ ಮತ್ತು ಬೆದರಿಕೆ ಹಾಕಿರುವುದಾಗಿ ಪ್ರತಿ ದೂರು ದಾಖಲಾಗಿದೆ.