Girl in a jacket

ಟ್ರಾನ್ಸ್ ಫಾರಂಗೆ ನೇಣುಬಿಗಿದುಕೊಂಡು ಆತ್ಮಹತ್ಯೆ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ಅರಳೀಕೊಪ್ಪದಲ್ಲಿ, ಟ್ರಾನ್ಸಫಾರಮ್‌ಗೆ ನೇಣುಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. 

ಅರಳೀಕೊಪ್ಪ ಗ್ರಾಮದ ಹಾನಂಬಿ ಹೊಳೆಯ ಮೇಲ್ಭಾಗ ಇರುವ ಟ್ರಾನ್ಸಫಾರಮ್‌ ನಲ್ಲಿ, ಸಾಗರ ಪೇಟೆಯ ಜನ್ನತ್‌ ನಗರದ ನಿವಾಸಿ ಪ್ರಕಾಶ್‌ ಶೆಟ್ಟಿ ಎಂಬ ಹೆಸರಿನ 36 ವರುಷದ ಯುವಕನ ಶವ ಪತ್ತೆಯಾಗಿದೆ.  ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿಯೇ ಪತ್ತೆಯಾಗಿದ್ದು ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಆಗಿರಬಹುದು ಎಂದು ಶಂಕಿಸಲಾಗಿದೆ. 

ಯುವಕ ಬಾರ್‌ ಬೆಂಡಿಂಗ್‌ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ವಿಷಯ ತಿಳಿದು ಸ್ಥಳ ಪರಿಶೀಲನೆ ನಡೆಸಿದ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close