ಕೋವಿಡ್ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರವಿದ್ದಾಗ ಹಗರಣ ನಡೆದಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಜಿ ಸಚಿವ ಶ್ರೀರಾಮುಲು ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ನೋಟೀಸ್ ನೀಡಿರುವ ಬಗ್ಗೆ ಶಿವಮೊಗ್ಗದ ಸಂಸದ ಬಿವೈ ರಾಘವೇಂದ್ರ ದುರುದ್ದೇಶದಿಂದ ನೀಡಿದ ನೋಟೀಸ್ ಎಂದು ಬಣ್ಣಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕೋವಿಡ್ ಮಹಾಮಾರಿ ಬಂದಾಗ ಸರ್ಕಾರ ಜನರ ಜೊತೆ ನಿಂತಿತ್ತು. ಮಹಾಮಾರಿಯ ಹಾವಳಿಯಿಂದ ಜನರ ಜೀವನ ಉಳಿಸುವ ಯತ್ನ ನಡೆಸಿತ್ತು ಎಂದು ತಿಳಿಸಿದರು.
ರಾಜಕಾರಣಕ್ಕಾಗಿ ಈಗಿನ ಸಿಎಂ ಮತ್ತು ಡಿಸಿಎಂ ಇಬ್ಬರು ತಮ್ಮ ತಮ್ಮ ಹಗರಣವನ್ನ ಮುಚ್ಚಿಕೊಳ್ಳುವ ಸಲುವಾಗಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಡಿಎಸಿಎಂ ಡಿಕೆ ಶಿವಕುಮಾರ್ ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಮಾಡಿರುವ ಹೇಳಿಕೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.
ಸಿಎಂ ವಿರುದ್ಧ, ಮೂಡಾ, ವಾಲ್ಮೀಕಿ ನಿಮಗದಲ್ಲಿ ನಡೆದ ಭ್ರಷ್ಠಾಚಾರದ ಆರೋಪಗಳು ಕೇಳಿ ಬರುತ್ತಿರುವ ಇಂತಹ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯಾದ್ಯಕ್ಷರು ಯಾವ ಚಕಾರನೂ ಎತ್ತದೆ. ದುರುದ್ಧೇಶದಿಂದ ವಿಪಕ್ಷಗಳ ವಿರುದ್ಧ ಮುಗಿಬೀಳುವ ಮೂಲಕ ಜನರ ಗಮನ ಬೇರೆ ತಿರುಗಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಇವೆಲ್ಲಾ ಯಾವುದೂ ಹೊಸದು ಅಲ್ಲ, ಆರೋಪ ಮತ್ತು ಪ್ರತ್ಯಾರೋಪಗಳುಕೇಳಿ ಬಂದಾಗ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವ್ಯವಸ್ಥೆ ಇದೆ. ಕೋವಿಡ್ ಸಂದರ್ಭದಲ್ಲಿ ನಡೆದ ಹಗರಣ ಎಂದು ಏನು ರಾಜ್ಯ ಸರ್ಕಾರ ಬಿಂಬಿಸಲು ಹೊರಟಿದೆ ಅದರಲ್ಲೂ ಬಿಜೆಪಿಗೆ ನ್ಯಾಯಸಿಗಲಿದೆ. ಈಗ ಎನು ರಾಜ್ಯ ಸರ್ಕಾರ ಮಾಡಲು ಹೊರಟಿರುವ ಆರೋಪ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಯಡಿಯೂರಪ್ಪನವರ ವಿರುದ್ಧ ಕೊಲೆ ಸಂಚು ನಡೆದಿತ್ತು ಈಗ ಅವರನ್ನ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಹೇಳಿಕೆಯನ್ನ ಸಮರ್ಥಿಸಿಕೊಂಡ ಸಂಸದರು ಯಡಿಯೂರಪ್ಪನವರ ರಾಜಕೀಯ ಜೀವನದಲ್ಲಿ ಹಲ್ಲೆ, ಕೊಲೆ ಬೆದರಿಕೆಗಳು ನಡೆದಿತ್ತು. ಯಾರೋ ಆಶ್ರಯದಲ್ಲಿ ಬೆಳೆದು ಬಂದ ರಾಜಕಾರಣಿ ಯಡಿಯೂರಪ್ಪ ಅಲ್ಲ, ಹೋರಾಟದಿಂದ ಬೆಳೆದು ಬಂದ ರಾಜಕಾರಣಿ ಹಾಗಾಗಿ ಯಾರೂ ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.