Girl in a jacket

ಕನ್ನಡ ಮಾಧ್ಯಮದ ಮಕ್ಕಳಿಗೆ ಮೀಸಲಾತಿ ಜಾರಿಯಾಗುವ ಅಗತ್ಯವಿದೆ–ಅಮರೇಶ್ವರ ಮಹಾಸ್ವಾಮಿಗಳು


ಸುದ್ದಿಲೈವ್/ಸೊರಬ, ನವೆಂಬರ್ 1

ಕನ್ನಡ ನಾಡಿನಲ್ಲಿ, ಆಂಗ್ಲಭಾಷೆಯ ಪ್ರಭಾವದಿಂದ ಕನ್ನಡ ಅಳಿವಿನಂಚಿನತ್ತ ಸಾಗುತ್ತಿದೆ. ಈ ಹಿನ್ನಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಮೀಸಲಾತಿ ಜಾರಿಗೊಂಡರೆ, ಕನ್ನಡದಲ್ಲಿ ಓದುಗರ ಸಂಖ್ಯೆ ಹೆಚ್ಚಳವಾಗಲಿದ್ದು, ಭಾಷೆಯ ಬಲವರ್ಧನೆಗೆ ಸಹಾಯವಾಗಲಿದೆ ಎಂದು ಸೊರಬದ ಕಾನುಕೇರಿ ಮಠದ ಅಮರೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ಕಾನುಕೇರಿ ಮಠದಲ್ಲಿ ನಡೆದ ಶಿವಾನುಭವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, “ಭಾಷೆ ಸಂಸ್ಕೃತಿಯ ಆಧಾರಸ್ತಂಭವಾಗಿದ್ದು, ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಕನ್ನಡಪ್ರೇಮ ಕಡಿಮೆಯಾಗಿದ್ದು, ಆಂಗ್ಲ ಭಾಷೆಯ ಪ್ರಭಾವ ಹೆಚ್ಚಾಗಿದೆ” ಎಂದು ಒತ್ತಿಹೇಳಿದರು.

ಅವರು ಕನ್ನಡ ನಾಡು ನುಡಿಯ ಉಳಿವು ಹಾಗೂ ಬೆಳವಣಿಗೆಗಾಗಿ ಎಲ್ಲಾ ಕನ್ನಡಿಗರು ನಿತ್ಯ ಪ್ರಯತ್ನಿಸುತ್ತಾ, ಕನ್ನಡವನ್ನು ಮನೆ-ಮನದ ಭಾಷೆಯಾಗಿ ಬೆಳೆಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿಜಗುಣ ಚಂದ್ರಶೇಖರ್, ಲಿಂಗರಾಜಾ ಧೂಪದ ಮಠ, ವಿಶ್ವನಾಥ ಗೌಡ್ರು, ಇಂದೂಧರ, ಮಂಜಣ್ಣ ಹೊಸಕೊಪ್ಪ, ನಾಗರಾಜ್ ಗುತ್ತಿ, ರೇಖಾ ಸಣ್ಣಲಿಂಗಣ್ಣನವರಂತಹ ಗಣ್ಯರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close