ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ವಿನೋಬ ನಗರದ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ನಡೆದಿರುವ ಬಗ್ಗೆ ಎಫ್ಐಆರ್ ದಾಖಲಾಗಿದೆ. ಮಹಿಳೆಯರಿಗೆ ಹಣ ಆಮಿಷ ತೋರಿಸಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂದು ದೂರು ದಾಖಲಾಗಿದೆ.
ವಿನೋಬ ನಗರದ ಕೆಹೆಚ್ ಬಿ ಕಾಲೋನಿಯ ಎಫ್ ಬ್ಲಾಕ್ ನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ವಿನೋಬ ನಗರದ ಪೊಲೀಸರಿಗೆ ಲಭ್ಯವಾಗಿದೆ. ಮಹಿಳೆಯರನ್ನ ಹಣದ ಆಮಿಷಗಳನ್ನೊಡ್ಡಿ ಗಿರಾಕಿಗಳನ್ನ ಕರೆಯಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾದ ಬೆನ್ನಲ್ಲೇ ದೂರು ದಾಖಲಾಗಿದೆ.
ಈ ಹಿನ್ನಲೆಯಲ್ಲಿ ವಿನೋಬ ನಗರದ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರ ವಿರುದ್ಧ ಸುಮೋಟೊ ದೂರು ದಾಖಲಾಗಿದೆ. ಬ್ಯೂಟಿ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ, ಮನೆಯೊಂದರಲ್ಲಿ ವೈಶ್ಯವಾಟಿಕೆಗಳು ಅತಿ ಹೆಚ್ಚು ದೂರು ದಾಖಲಾಗುತ್ತಿರುವುದು ವಿನೋಬ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೇ ಹೆಚ್ಚಾಗಿದೆ.