ಸುದ್ದಿಲೈವ್/ಹೊಳೆಹೊನ್ನೂರು
ಸಮೀಪದ ಮೈದೊಳಲು ಗ್ರಾಪಂನ ಮೂರು ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಮಲ್ಲಾಪುರದ ಮೂಡ್ಲೇರ್ ಪರಮೇಶ್ವರಪ್ಪ, ರಾಮರಾವ್ ಮುತ್ಯಾಲ, ವಿಶಲಾಕ್ಷಿರಂಗಪ್ಪ ಅವಿರೊದ್ಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ನೀರಾವರಿ ಇಲಾಖೆ ಅಧಿಕಾರಿ ಕೊಟ್ರೇಶಪ್ಪ, ಭದ್ರಾವತಿ ತೋಟಗಾರಿಕೆ ಇಲಾಖೆಯ ಸಂದೀಪ್ ಕುಮಾರ್ ಉಪ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಭದ್ರಾವತಿ ತಾಲೂಕು ಅರಹತೊಳಲು ಗ್ರಾಪಂನಲ್ಲಿ ಮಾಜಿ ಸದಸ್ಯರಾದ ಅಶ್ವಿನಿ, ಆಶಾ, ನಾಗಮ್ಮ ಇವರ ರಾಜೀನಾಮೆಯಿಂದ ತೆರವಾಗಿದ ಮೂರು ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೌರಮ್ಮ, ಸುಧಾ, ಕೆ.ಸಿ.ವಿದ್ಯಾ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ನೀರಾವರಿ ಇಲಾಖೆಯ ಶ್ರೀಧರ್ ಕರ್ತವ್ಯ ನಿರ್ವಹಿಸಿದರು.