ಇಂದಿನಿಂದ ಡಿಸೆಂಬರ್ 30 ರವರೆಗೆ ವಿಜಯ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ



ಸುದ್ದಿಲೈವ್/ಶಿವಮೊಗ್ಗ

15 ವರ್ಷದೊಳಗಿನ ಬಾಲಕಿಯರ ಕ್ರಿಕೆಟ್ ಪಂದ್ಯಾವಳಿಗಳು ಮುಗಿದ ಬೆನ್ನಲ್ಲೇ ಶಿವಮೊಗ್ಗದಲ್ಲಿ ಗ್ರೂಪ್ ಸಿ ವಿಭಾಗದ ಬಾಲಕರ 16 ವರ್ಷದೊಳಗಿನ ಬಿಸಿಸಿಐ ವಿಜಯ ಮರ್ಚೆಂಟ್ ಟ್ರೋಫಿಯ ಕ್ರಿಕೆಟ್ ಪಂದ್ಯಾವಳಿಗಳು ಇಂದಿನಿಂದ ಆರಂಭಗೊಂಡಿದೆ.  ನವುಲೆಯ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಮತ್ತು ಜೆಎನ್ ಎನ್ ಸಿಇ ಕಾಲೇಜಿನಲ್ಲಿ ಇಂದಿನಿಂದ ಡಿ.30 ರವರೆಗೆ ಪಂದ್ಯಾವಳಿಗಳು ನಡೆಯಲಿದೆ.

ಇಂದು ಚತ್ತೀಸ್ ಘಡ ಮತ್ತು ಹಿಮಾಚಲ ಪ್ರದೇಶದ ನಡುವೆ ಕೆಎಸ್ ಸಿಎ ಮೈದಾನದಲ್ಲಿ ನಡೆಯಲಿದೆ. ನಾಳೆ ಕೆಎಸ್ ಸಿಎ ಮೈದಾನ-2 ರಲ್ಲಿ ಪಂಜಾಬ್ ಮತ್ತು ದೆಹಲಿ, ನಾಡಿದ್ದು ಚಂಡೀಘಡ ಮತ್ತು ಸೌರಾಷ್ಟ್ರದ ನಡುವೆ ಜೆಎನ್ ಎನ್ ಸಿಎ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿದೆ. 

ಡಿ.11 ರಂದು ಜೆಎಸ್ ಸಿಎ ಮೈದಾನಗಳಲ್ಲಿ ಚಂಡೀಗಡ್ ಮತ್ತು ದೆಹಲಿ ನಡುವೆ, ಡಿ.12 ರಂದು ಚತ್ತೀಸ್ ಘಡ್ ಮತ್ತು ಪಂಜಾಬ್ ಮತ್ತು ಹಿಮಾಚಲ ಪ್ರದೇಶ್ ಮತ್ತು ಸೌರಾಷ್ಟ್ರಗಳ ನಡುವೆ ನಡೆಯಲಿದೆ. 

ಡಿ.17 ರಂದು ಹಿಮಾಚಲ ಪ್ರದೇಶ ಮತ್ತು ದೆಹಲಿ, ಡಿ.18 ರಂದು ಚತ್ತೀಸ್ ಘರ್ ಮತ್ತು ಪಂಜಾಬ್ ಹಾಗೂ ಡಿ.19 ರಂದು ಚಂಡೀಗಡ ಮತ್ತು ಪಂಜಾಬ್ ನಡುವೆ ಪಂದ್ಯಾವಳಿಗಳು ನಡೆಯಲಿವೆ. ಡಿ.22 ರಂದು ಚತ್ತೀಸ್ ಗಡ ಮತ್ತು ಚಂಡೀಗಡ, ಡಿ.23 ರಂದು ದೆಹಲಿ ಮತ್ತು ಸೌರಾಷ್ಟ್ರ, ಡಿ.24 ರಂದು ಹಿಮಾಚಲ ಪ್ರದೇಶ ಮತ್ತು ಪಂಜಾಬ್ ನಡುವೆ ಪಂದ್ಯಾವಳಿಗಳು ನಡೆಯಲಿದೆ. 

ಡಿ.28 ರಂದು ಪಂಜಾಬ್ ಮತ್ತು ಸೌರಾಷ್ಟ್ರ, ಡಿ.29 ರಂದು ಚಂಡೀಗಡ ಮತ್ತು ಹಿಮಾಚಲ ಪ್ರದೇಶ, ಡಿ.30 ರಂದು ಚತ್ತೀಸ್ ಗಡ ಮತ್ತು ದೆಹಲಿ ನಡುವೆ ಪಂದ್ಯಾವಳಿಗಳು ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close