ಸುದ್ದಿಲೈವ್/ಶಿಕಾರಿಪುರ
ಬ್ಯಾಂಕ್ ವೊಂದರಲ್ಲಿ 'ಡಿ'ಗ್ರೂಪ್ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದವನ ಮತ್ತು ಮತ್ತೋರ್ವ ಮಹಿಳೆಯ ವಿರುದ್ಧ 79 ಲಕ್ಷದ 5 ಸಾವಿರ ರೂ. ವಂಚಿಸಿದ ಘಟನೆ ಶಿಕಾರಿಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.
ಹಿತ್ತಲ ಗ್ರಾಮದಲ್ಲಿರುವ ಕೆನೆರಾ ಬ್ಯಾಂಕ್ ನಲ್ಲಿ ಸಂದೀಪ್ ಎಂಬಾತ ದಿನಗೂಲಿ ನೌಕರನಾಗಿದ್ದು, ಆತ ಪಾಸ್ ಬುಕ್ ಎಂಟ್ರಿ ಮಾಡಿಕೊಡುವುದು ಆತನ ಕೆಲಸವಾಗಿದೆ. ಆದರೆ ಮಾಡುವ ಕೆಲಸ ಬಿಟ್ಟು ಇತರೆ ಕೆಲಸ ಮಾಡುವುದು ಆತನ ವಿರುದ್ಧದ ಆರೋಪವಾಗಿದೆ.
ಪಾಸ್ ಬುಕ್ ಎಂಟ್ರಿ ಮಾಡುವ ಜೊತೆ ಯಾರ ಪಾಸ್ ಬುಕ್ ನಲ್ಲಿ ಎಷ್ಟು ಹಣವಿದೆ ಎಂಬುದು ನೋಡಿ ಅಧಿಕ ಹಣವಿದ್ದರೆ ಅವರ ಮನೆಗೆ ನೇರವಾಗಿ ಹೋಗಿ, ಬ್ಯಾಂಕ್ ನ ಪಾಸ್ ಬುಕ್ ನಲ್ಲಿ ಹಣ ವಿಟ್ಟರೆ ಏನು ಪ್ರಯೋಜನ? ಅಧಿಕ ಲಾಭಕೊಡಿಸುವ ಆಸೆ ತೋರಿಸಿ ಹಣ ಹೂಡಿಕೆ ಮಾಡಿಸುತ್ತಿದ್ದ ಎಂಬ ಆರೋಪ ಆತನ ಮೇಲಿದೆ.
ಹೀಗೆ ಸುರೇಶ್, ಕಮಲಮ್ಮ, ಬಸವರಾಜಪ್ಪ, ವಿಜಯ ಲಕ್ಷ್ಮಿ, ನಾಗರಾಜಪ್ಪ, ಅನಿತರವರಿಂದ 79 ಲಕ್ಷದ 5 ಸಾವಿರ ರೂ.ಗಳನ್ನ ಅಕೌಂಟ್ ಗಳಿಗೆ ಹಾಕಿಸಿಕೊಂಡು ಹಣ ವಾಪಾಸ್ ನೀಡದೆ ವಂಚಿಸಿರುವುದಾಗಿ ಶಿಜಾರಿಪುರದ ರೂರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುರೇಶ್ ಮತ್ತು ಚೈತ್ರಾರವರ ಇಬ್ಬರ ಅಕೌಂಟ್ ಗೆ ಹಣ ಹಾಕಿಸಿಕೊಂಡಿರುವ ಇವರು ನಿವೇಶನ, ಕೋಟಿರೂ. ಬೆಲೆಬಾಳುವ ಮನೆ ಖರೀದಿ, ಬಂಗಾರ ಖರೀದಿ ಮಾಡಿಕೊಂಡು ತಮ್ಮ ಸಂಬಂಧಿಕರ ಅಕೌಂಟ್ ನಲ್ಲಿ ಹಣ ಇಟ್ಟುಕೊಂಡಿರುವುದಾಗಿ ದೂರಲಾಗಿದೆ.