ಚಿನ್ನದನಾಣ್ಯವೆಂದು ನಂಬಸಿ ಐದು ಲಕ್ಷ ರೂ ವಂಚನೆ



ಸುದ್ದಿಲೈವ್/ಶಿವಮೊಗ್ಗ

3 ಕೆಜಿಯಷ್ಟು ಹಳೆ ನಾಣ್ಯಗಳಿವೆ ತಗೋಂತೀರಾ ಎಂದು ನಂಬಿಸಿ 5 ಲಕ್ಷದ ವರೆಗೆ ವಂಚಿಸಿದ ಘಟನೆ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬೆಂಗಳೂರಿನಲ್ಲಿ ಹಳೇ ಕಾಯಿನ್ ಗಳ ಎಕ್ಸಿಬಿಷನ್ ನೋಡಿಕೊಂಡು ಬರುತ್ತಿದ್ದ  ವ್ಯಕ್ತಿ ಇಬ್ರಾಹಿಂ ಸಾಹೇಬರಿಗೆ ಅವರ ಏರಿಯಾದ ಮಟನ್ ಅಂಗಡಿ ಮಾಲೀಕ ಫೈರೋಜ್  ಭೇಟಿಯಾಗಿ ಹಳೇಯ ಕಾಯಿನ್ ಸಂಗ್ರಹಿಸುವುದಾದರೆ ಓರ್ವ ಕರೆ ಮಾಡಿ   ಕಾಯಿನ್ ಇದೆ ಕೊಂಡುಕೊಳ್ಳುವುದಾದರೆ ಕೊಂಡು ಕೊಳ್ಳಿ ಎಂದು ಹೇಳಿದ್ದಾನೆ ಶಾಹುಲ್ ಎಂದು ಆತನ ಹೆಸರು ಎಂದು ಮೊಬೈಲ್ ನಂಬರ್ ನೀಡಿದ್ದರು‌. 

ಆತನ ನಂಬರ್ ಪಡೆದ ಇಬ್ರಾಹಿಂ ಸಾಹೇಬರು ಕರೆ ಮಾಡಿದಾಗ 3 ಕೆಜಿ ಹಳೆಯ ಚಿನ್ನದ ನಾಣ್ಯವಿದೆ. ಅರ್ಧರೇಟಿಗೆ ತಗೊಂತೀರಾ ಎಂದು ಪ್ರಶ್ನಿಸಿದ್ದ. ಇನ್ನೊಂದು ನಂಬರ್ ನಿಂದ ನಾಣ್ಯದ ಫೊಟೊ ಕಳುಹಿಸಿ ಸವಳಂಗಕ್ಕೆ ಕರೆಸಿದ್ದ. ಸವಳಂಗಕ್ಕೆ ಕರೆಯಿಸಿಕೊಂಡು ಚಿನ್ನದ ನಾಣ್ಯ ನೀಡಿ ಪರಿಶೀಲಿಸಿಕೊಳ್ಳಿ ಎಂದು ಹೇಳಿ ಕಳುಹಿಸಿದ್ದ. 

ಚಿನ್ನದ ನಾಣ್ಯವನ್ನ ಬೆಂಗಳೂರಿಗೆ ತೆಗೆದುಕೊಂಡು ಹೋದ ಇಬ್ರಾಹಿಂ ಸಾಹೇಬರು ಪರಿಶೀಲಿಸಿದಾಗ ಅವರ ಬಳಿಯಿರುವ ನಾಣ್ಯ ಅಸಲಿ ಚಿನ್ನದ ನಾಣ್ಯವೆಂದು ಖಾತರಿಯಾಗಿದೆ. ಆಗ ಕರೆ ಮಾಡಿ 8 ಲಕ್ಷಕ್ಕೆ 200 ಗ್ರಾಂ ಚಿನ್ನದ ನಾಣ್ಯ ಖರೀದಿಗೆ ಡೀಲ್ ಮಾಡ್ಕೊಂತಾರೆ. ಶಾಹುಲ್ ಇಬ್ರಾಹಿಂ ಸಾಹೇಬರನ್ನ  ಶಿವಮೊಗ್ಗಕ್ಕೆ ಕರೆಯಿಸಿಕೊಂಡು ಆಯನೂರಿಗೆ ಬರಲು ಹೇಳಿರುತ್ತಾನೆ. 

ಆಯನೂರಿನಿಂದ ಹಾರನಹಳ್ಳಿಯ ಗೋಡಾನ್ ಗೆ ಶಾಹೂಲ್ ಇಬ್ರಾಹಿಂರನ್ನ  ಕರೆದುಕೊಂಡು ಹೋಗಿದ್ದಾನೆ. ಅಲ್ಲಿ 5 ಲಕ್ಷ ರೂ. ಹಣ ಪಡೆದು 200 ಗ್ರಾಂ ನ ಚಿನ್ನದ ಕಾಯಿನ್ ನ ಚೀಲ ನೀಡಿದ್ದಾರೆ. ಹಣಪಡೆದ ಶಾಹೂಲ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಬೆಂಗಳೂರಿಗೆ ತೆರಳಿದ ಇಬ್ರಾಹಿಂರು ತಮಗೆ ಗೊತ್ತಿರುವ ಕಡೆ ಪರಿಶೀಲಿಸಿದಾಗ ತಮ್ಮ‌ಬಳಿ ಇರುವ ನಾಣ್ಯಗಳು ನಕಲಿ ಎಂದು ಸಾಬೀತಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close