ಜಿಲ್ಲಾ ಅಟ್ರಾಸಿಟಿ ಸಮಿತಿಗೆ ಸದಸ್ಯರ ಆಯ್ಕೆ-ಕೆಲವರ ಆಯ್ಕೆ ಬಗ್ಗೆ ಹರಮಘಟ್ಟ ರಂಗಪ್ಪ ಆಕ್ಷೇಪ

 


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ದೌರ್ಜನ್ಯ ಪ್ರತಿಬಂಧ ಸಮಿತಿ ಅಧಿಕಾರೇತರ ನಾಮನಿರ್ದೇಶನ ಸದಸ್ಯರ (ಅಟ್ರಾಸಿಟಿ ಸಮಿತಿ)ನೇಮಕಾತಿ ನಡೆದಿದ್ದು ಐವರನ್ನ ಆಯ್ಕೆ ಮಾಡಲಾಗಿದೆ.

ಎಸ್ಸಿಯಾಗಿ ಶಿವಬಸಪ್ಪ, ರುದ್ರಪ್ಪ, ಬೂದಿಗೆರೆ ಬಸವರಾಜ್, ಮಂಜುನಾಥ್ ಅವರು ಆಯ್ಕೆಯಾದರೆ, ಎಸ್ಟಿ ವಿಭಾಗದಿಂದ ಅಣ್ಣಪ್ಪನವರನ್ನ ನೇಮಿಸಲಾಗಿದೆ. ಮೂವರು ಹಿಂದುಳಿದ ವರ್ಗದದಿಂದ ಶಿವಮೊಗ್ಗದ ದಿನೇಶ್, ತೀರ್ಥಹಳ್ಳಿಯಿಂದ ನಾಗರಾಜ್ ಮತ್ತು ಸೊರಬದಿಂದ ಓಂಪ್ರಕಾಶ್ ರನ್ನ ನೇಮಿಸಲಾಗಿದೆ.

ಆಕ್ಷೇಪ
ಇಂದು ಸಮಾಜ ಕಲ್ಯಾಣ ಕಚೇರಿಯಲ್ಲಿ ಅಟ್ರಾಸಿಟಿ ಸಮಿತಿಗೆ ಸದಸ್ಯರ ಆಯ್ಕೆಯ ಪ್ರಕ್ರಿಯೆ ನಡೆದಿದೆದೆ. ಆದರೆ ಕೆಲವರ ಆಯ್ಕೆ ವಿಚಾರದಲ್ಲಿ ಡಿಎಸ್ ಎಸ್ ಹರಮಘಟ್ಟ ರಂಗಪ್ಪನವರ ಬಣ ಆಕ್ಷೇಪಿಸಿದೆ. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಆಯ್ಕೆ ವಿಚಾರದಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ.ಅರ್ಜಿದಾರರ ಪೂರ್ಣ ಪ್ರಮಾಣದಲ್ಲಿ ಪೊಲೀಸ್ ವೆರಿಫಿಕೇಷನ್ ಆಗದೆ ಡಿಸಿಗೆ ತಪ್ಪು ಮಾಹಿತಿ ನೀಡಿ ಸಮಿತಿ ರಚಿಸಲಾಗಿದೆ ಎಂದು ದೂರಿದರು. 

ಆಯ್ಕೆಯ ವಿಚಾರವಾಗಿ ಡಿ.02 ರಂದೇ ಗುಪ್ತವಾಗಿ ಸಮಾಜ ಕಲ್ಯಾಣ ಇಲಾಖೆಯ ಡಿಡಿ ಮಲ್ಲೇಶಪ್ಪ ಆಯ್ಕೆ ಮಾಡಿ ಇಟ್ಟಿದ್ದಾರೆ. ದಲಿತ ಹೋರಾಟಗಾರರು, ಹಿರಿಯರು, ಸಮಾಜಕ್ಕೆ ಶ್ರಮಿಸಿದವರು ಮತ್ತು ಶೋಷಿತ ವರ್ಗದವರನ್ನ ಈ ಸಮಿತಿಗೆ ಆಯ್ಕೆ ಮಾಡಬೇಕು. ಕೆಲವರ ಆಯ್ಕೆ ಸೂಕ್ತವಾಗಿದ್ದರು. ಇನ್ನು ಕೆಲವರ ಆಯ್ಕೆಯ ವಿಚಾರದಲ್ಲಿ ಡಿಡಿಯವರು ರಾಜಕೀಯ ಆಮಿಷಕ್ಕೆ ಬಲಿಯಾಗಿರುವುದಾಗಿ ಕಂಡುಬರುತ್ತಿದೆ. ಹಾಗಾಗಿ ಸಮಿತಿಯನ್ನ ಮತ್ತೊಮ್ಮೆ ಪುನರ್ ಪರಿಶೀಲಿಸಬೇಕು. 

ಕರ್ತವ್ಯ ಲೋಪವೆಸಗಿರುವ ಉಪನಿರ್ದೇಶಕರು ಸಮಿತಿ ಆಯ್ಕೆಯನ್ನ ಪುನರ್ ಪರಿಶೀಲನೆ ಮಾಡದಿದ್ದರೆ ಡಿಡಿಯ ವಿರುದ್ಧ ಡಿಎಸ್ಎಸ್ ಹೋರಾಡಲಿದೆ ಎಂದು ಎಚ್ಚರಿಸಿದ್ದಾರೆ.

ಕರೆ ಸ್ವೀಕರಿಸದ ಡಿಡಿ

ಈ ಪ್ರಕರಣದ ಕುರಿತು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲೇಶಪ್ಪ ಸುದ್ದಿಲೈವ್ ನ  ಕರೆಯನ್ನ ಸ್ವೀಕರಿಸದೆ ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡುವಲ್ಲಿ ವಿಫಲರಾಗಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close