ಮೆಗ್ಗಾನ್ ನ ಶೌಚಾಲಯದಲ್ಲಿ ಬ್ರುಣ ಪತ್ತೆ


ಸುದ್ದಿಲೈವ್/ಶಿವಮೊಗ್ಗ

ಮೆಗ್ಗಾನ್ ಹೆರಿಗೆ ಮತ್ತು ಮಕ್ಕಳ ವಿಭಾಗದ ಶೌಚಾಲಯದಲ್ಲಿ ನವಜಾತ ಶಿಶುವೊಂದು ಶವವಾಗಿ ಪತ್ತೆಯಾಗಿದೆ. ಈ ಪ್ರಕರಣ ಹಲವು ಅನುಮಾನವನ್ನ ವ್ಯಕ್ತಪಡಿಸಿದೆ. 

ಈ ಪ್ರಕರಣ ಯಾರು ಏನು ಎಂಬುದನ್ನ ಪತ್ತೆ ಹಚ್ಚಬೇಕಿದೆ. ಆದರೆ ಓರ್ವ ಮಹಿಳೆಯ ಮೇಲೆ ಅನುಮಾನ ವ್ಯಕ್ತವಾಗಿದೆ. ಈ ಮಹಿಳೆ ಮೆಗ್ಗಾನ್ ಹೆರಿಗೆ ವಾರ್ಡ್ ನಲ್ಲಿ ದಾಖಲಾಗಿದ್ದ ದಾಖಲಾತಿಯ ಕೆಶೀಟ್ ಗಳನ್ನೇ ಎತ್ತಿಕೊಂಡು ಹೋಗಿದ್ದರಿಂದ ಆಕೆಯ ಮೇಲೆ ಸಹಜವಾಗಿ ಅನುಮಾನ ವ್ಯಕ್ತವಾಗುತ್ತಿದೆ. 

ಮನೆಯಲ್ಲಿ ಹೆರಿಗೆ ಆಗಿದೆ. ಕಸ ತೆಗೆಯಬೇಕು ಎಂದು ಹೇಳಿ ನಿನ್ನೆ ಮೆಗ್ಗಾನ್ ಗೆ ಮಹಿಳೆಯೊಬ್ಬರು ದಾಖಲಾಗಿದ್ದರು. ರಾತ್ರಿ 12 ಗಂಟೆಯ ಸುಮಾರಿಗೆ ಶೌಚಾಲಯದ ಡಸ್ಟ್ ಬಿನ್ ನಲ್ಲಿ ನವಜಾತ ಹೆಣ್ಣು ಶಿಶು ಶವವಾಗಿ ಪತ್ತೆಯಾಗಿದೆ. 10 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎಂದು ಶಂಕಿಸಲಾಗುತ್ತಿದೆ. 

ಆ ವೇಳೆ ಕಸತೆಗೆಸ ಬೇಕು ಎಂದು ದಾಖಲಾಗಿದ್ದ ಮಹಿಳೆ ಕೆಶೀಟ್ ಸಮೇತ ನಾಪತ್ತೆಯಾಗಿರುವುದರಿಂದ ಈ ಮಹಿಳೆಯ ಮೇಲೆ ಅನುಮಾನ ಹೆಚ್ಚಾಗಿದೆ. ಗಂಡ ಹೆಂಡತಿ ನಡುವಿನ ಜಗಳದಿಂದ ಮಗುವನ್ನ ಮಹಿಳೆ ತೆಗೆಸಿಕೊಂಡು ಬಂದು ಆಸ್ಪತ್ರೆಗೆ ದಾಖಲಾಗಿರುವ ಶಂಕೆ ವ್ಯಕ್ತವಾಗಿದೆ. 6 ತಿಂಗಳ ಗರ್ಭಾವ್ಯವಸ್ಥೆಯಲ್ಲಿ ಮಗು ಸತ್ತಿದ್ದು, ಅದನ್ನ ಹೊರಗಡೆ ತೆಗೆಸಿ ಮೆಗ್ಗಾನ್ ನಲ್ಲಿ ಬಂದು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. 

ಮಗುವಿನ ಜನ್ಮವನ್ನ ಮುಚ್ಚಿಡುವ ಪ್ರಯತ್ನ ಮೆಗ್ಗಾನ್ ನಲ್ಲಿ ಹೊಸದಲ್ಲ. ವರ್ಷಕ್ಕೆ ಎರಡು ಮೂರು ಇದ್ದೇ ಇರುತ್ತಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿಕೊಂಡರೆ ಈ ವರ್ಷ ಕಡಿಮೆ ಎಂದು ಮಾತ್ರ ಹೇಳಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close