ಸುದ್ದಿಲೈವ್/ಶಿವಮೊಗ್ಗ
ಮಲೆನಾಡಿನ ಶರಾವತಿ ಹಿನ್ನೀರಿನ ಮರಳಿನ ಟಿಂಡರ್ ನಲ್ಲಿ ಶಾಸಕ ಗೋಪಾಲ ಕೃಷ್ಣ ಬೇಳೂರು ರಾಜಕೀಯ ಮಾಡಿ ತಮ್ಮ ವಿರೋಧಿಗಳನ್ನ ತುಳಿಯುವ ಪ್ರಯತ್ನ ಮಾಡುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯವ ಪ್ರಯತ್ನ ಮಾಡಿದ್ದಾರೆ.
ಶಾಸಕರು ಅವರಿಗೆ ಬೇಕಾದವರಿಗೆ ಅವಕಾಶ ಮಾಡಿಕೊಟ್ಟು ಉಳಿದವರ ಹಿಂದೆ ಪೊಲೀಸರ ಜೊತೆ ಇತರೆ ಇಲಾಖೆಗಳ ಅಧಿಜಾರಿಗಳನ್ನ ಛೂ ಬಿಟ್ಟು ರೈಡ್ ಮಾಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪವಮ್ನ ಇಂದು ಬಿಜೆಪಿ ಮಾಡಿದೆ.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಉಪಾಧ್ಯಕ್ಷ ಹಾಲಪ್ಪ ಮತ್ತು ಜಿಲ್ಲಾಧ್ಯಕ್ಷ .ಟಿ.ಡಿ ಮೇಘರಾಜ್ ಮಲೆನಾಡಿನ ಶರಾವತಿ ಹಿನ್ನೀರಿನಲ್ಲಿ ಮರಳು ಇದೆ. ಇದನ್ನು ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತದೆ. ಕಳೆದ ಒಂದೂವರೆ ವರ್ಷದಿಂದ ಕೇವಲವೆ ಕೆಲವು ಜನ ಮಾತ್ರ ಮರಳು ಗಣಿಗಾರಿಕೆ ಮಾಡಲಾಗುತ್ತಿದೆ.
ಉಳಿದವರು ಮಾಡಿದ್ರೆ ತಡೆಯಲಾಗುತ್ತಿದೆ. ಇದನ್ನು ಪೊಲೀಸರು, ತಹಶೀಲ್ದಾರ್ ಅರಣ್ಯ ಇಲಾಖೆರವರ ಮೂಲಕ ತಡೆಯಲಾಗುತ್ತಿದೆ. ಗುಂಪುಗಾರಿಕೆ ನಡೆಸಲಾಗುತ್ತಿದೆ. ಪೊಲೀಸರ ಕೆಳ ಹಂತದವರಿಂದ ತಡೆಯಲಾಗುತ್ತಿದೆ. ಪೊಲೀಸರು, ಗಣಿ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರನ್ನ ಬಿಜೆಪಿ ಮಾಡಿದೆ.
ಮರಳುಗಣಿಗಾರಿಕೆಯನ್ನು ತಡೆಯಬಾರದು ಎಂದು ಮನವಿ ಮಾಡಲಾಗುತ್ತಿದೆ. 1 ಲಕ್ಷ ರೂ ಪೊಲೀಸರಿಗೆ ಲಂಚ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಜಂಬಿಟ್ಟಿಗೆ ಕಲ್ಲುಗಣಿಗಾರಿಕೆಯನ್ನು ಸಹ ತಡೆಯುತ್ತಿದ್ದಾರೆ. ಪೊಲೀಸರ ಮೂಲಕ ಅಧಿಕಾರದಲ್ಲಿ ಇರುವವರು, ರಾಜಕೀಯ ಪುಡಾರಿಗಳಿಂದ ಮಾಡಲಾಗುತ್ತಿದೆ.