ಸುದ್ದಿಲೈವ್/ಶಿವಮೊಗ್ಗ
ಟಿವಿ ರಿಮೋಟ್ ಸಿಗಲಿಲ್ಲವೆಂಬ ಕಾರಣಕ್ಕೆ 16 ವರ್ಷದ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಸೂಳೆಬೈಲಿನಲ್ಲಿ ಸಹನಾ ಎಂಬ 16 ವರ್ಷದ ಬಾಲಕಿ ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಜ್ಜಿ ರಿಮೋಟ್ ಕೊಡಲಿಲ್ಲವೆಂಬ ಕಾರಣಕ್ಕೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಟಿವಿ ರಿಮೋಟ್ ನೀಡದೆ ಬುದ್ದಿ ವಾದಹೇಳಿದ ಅಜ್ಜಿ ಮಾತಿನಿಂದ ಬೇಸರಗೊಂಡ ಬಾಲಕಿ ಇಲಿಪಾಶಣ ಸೇವಿಸಿದ್ದಾಳೆ ಎಂದು ತಿಳಿದು ಬಂದಿದೆ. ಸಣ್ಣಪುಟ್ಟ ಜಗಳಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವುದು ಪೋಷಕರಿಗೆ ಸವಾಲಾಗಿಯೇ ಉಳಿದಿದೆ.
ಬಾಲಕಿಯನ್ನ ಕಳೆದುಕೊಂಡ ಕುಟುಂಬದ ಆಕ್ರಂಧನ ಮುಗಿಲುಮುಟ್ಟಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಆಕೆಯನ್ನ ಮೆಗ್ಗಾನ್ ಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಹನಾ ವಿದ್ಯಾರ್ಥಿನಿಯಾಗಿರಲಿಲ್ಲ ಎಂದು ತಿಳಿದು ಬಂದಿದೆ.