ಮತ್ತೊಮ್ಮೆ ಷಡಾಕ್ಷರಿ!



ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಾಕ್ಷರಿಯವರು ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. 

ಇಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿಯಿರುವ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಮತದಾನ ನಡೆದಿದೆ.  ಕೃಷ್ಣೇಗೌಡ ಮತ್ತು ಸಿ.ಎಸ್ ಷಡಾಕ್ಷರಿಯವರ ನಡುವಿನ ಸ್ಪರ್ಧೆಯಲ್ಲಿ ಷಡಾಕ್ಷರಿಯವರು 507 ಮತಗಳನ್ನ ಪಡೆದು ಗೆದ್ದಬೀಗಿದರೆ ಬಿ.ಪಿ.ಕೃಷ್ಣೇಗೌಡ 442 ಮತಗಳನ್ನ ಪಡೆಯುವಲ್ಲಿ ಮಾತ್ರ ತೃಪ್ತಿಪಡಬೇಕಾಯಿತು. 

ಅದರಂತೆ ಖಜಾಂಚಿ ಸ್ಥಾನಕ್ಕೆ ಮತದಾನ ನಡೆದಿದ್ದು ನಾಗರಾಜ್ ಜುಮ್ಮನ್ನವರ 467 ಮತಗಳನ್ನ ಪಡೆದರೆ ವಿ.ವಿ.ಶಿವರುದ್ರಯ್ಯ 485 ಮತಗಳನ್ನ ಪಡೆದು ಗೆದ್ದು ಬೀಗಿದ್ದಾರೆ. 

ಷಡಾಕ್ಷರಿಯವರನ್ನ ಶಿವಮೊಗ್ಗದಿಂದ ಕೋಲಾರಕ್ಕೆ ವರ್ಗಾಯಿಸಲಾಗಿತ್ತು. ಅವರು ಮತ್ತೊಮ್ಮೆ ರಾಜ್ಯಾಧ್ಯಕ್ಷರಾಗ ಬಾರದು ಎಂಬ ತಂತ್ರಗಳು ನಡೆದವು. ತಂತ್ರಕ್ಕೆ ಪ್ರತಿತಂತ್ರಗಳನ್ನ ಹೂಡಿ ಷಡಾಕ್ಷರಿ ಮತ್ತೊಮ್ಮೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close