ಹೊಳೆಹೊನ್ನೂರು ಪೊಲೀಸರಿಂದ ಭರ್ಜರಿ ಭೇಟೆ

ಸಾಧರ್ಭಿಕ ಚಿತ್ರ


ಸುದ್ದಿಲೈವ್/ಶಿವಮೊಗ್ಗ

ಅಕ್ರಮ ಮರಳುಗಾರಿಕೆ ವಿರುದ್ಧ ಗ್ರಾಮಾಂತರ ಭಾಗದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಯುತ್ತಿದೆಯಾ ಎಂಬ ಅನುಮಾನಕ್ಕೆ ಈಡಾಗಿದೆ. 

ಇಂದು  ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಕೆರೆ ಗ್ರಾಮದ ಸಕ್ರೈಬೈಲು ಸಮೀಪ ಭದ್ರಾ ನದಿಯಲ್ಲಿ  ಮತ್ತು  ಮಂಗೋಟೆ ಗ್ರಾಮದ ಸಮೀಪ ಹಾದು ಹೋಗಿರುವ ತುಂಗಾ-ಭದ್ರಾ ನದಿಯಲ್ಲಿ ಸರ್ಕಾರದಿಂದ ಮರಳು ದಸ್ತಾನು ಮಾಡಲು ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ, ನದಿ ದಂಡೆಯಲ್ಲಿ ಸಂಗ್ರಹಿಸಿರುತ್ತಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.  

ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅನೀಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು -1 ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ. ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2, ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ  ನಾಗರಾಜ್, ಪೊಲೀಸ್ ಉಪಾಧೀಕ್ಷರು ಭಧ್ರಾವತಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ,   ಲಕ್ಮೀಪತಿ, ಪಿ.ಐ. ಹೊಳೆಹೊನ್ನೂರು ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದಾರೆ.‌ 

ಕಾಟಿಕೆರೆ ಗ್ರಾಮದ ಸಕ್ರೈಬೈಲು ಸಮೀಪ ಭದ್ರಾ ನದಿಯ ದಡದಲ್ಲಿ 10 ಮೆಟ್ರಿಕ್ ಟನ್ ಮರಳು  ಮತ್ತು  ಮಂಗೋಟೆ ಗ್ರಾಮದ ಸಮೀಪ ಹಾದು ಹೋಗಿರುವ ತುಂಗಾ-ಭದ್ರಾ ನದಿಯ ದಡದಲ್ಲಿ 10 ಮೆಟ್ರಿಕ್ ಟನ್ ಮರಳು ಸೇರಿ  ಒಟ್ಟು 20 ಮೆಟ್ರಿಕ್ ಟನ್ ಮರಳನ್ನು ಅಮಾನತ್ತು ಪಡಿಸಿಕೊಂಡು, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕಲಂ 303 (2) BNS ಕಾಯ್ದೆ ರೀತ್ಯಾ ಎರಡು ಪ್ರತ್ಯೇಖ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close