ಎಸ್ಪಿ ವಿರುದ್ದವೇ ಕೇಸ್ ಹಾಕಿದರೆ ಹೇಗೆ? ಈಶ್ವರಪ್ಪ


ಸುದ್ದಿಲೈವ್/ಶಿವಮೊಗ್ಗ

ಒಂದು ವಾರದಲ್ಲಿ ಎರಡು ಜಾಮೀನು ರಹಿತ ವಾರೆಂಟ್ ಬಂದಿದೆ. ಪೊಲೀಸ್ ಇಲಾಖೆಗೆ ಮಾರ್ಗದರ್ಶನದಿಂದ ಬಂದಿತೋ ಅಥವಾ ಅವರಿಗೆ ಕೆಟ್ಟಬುದ್ದಿ ಬಂದು ಬಂದಿತೋ ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಕ್ಫ್ ಆಸ್ತಿ ಎಂದು ಸಾವಿರಾರು ವರ್ಷದ ಆಸ್ತಿಯನ್ನ ಪರಿವರ್ತಿಸಿದ್ದಾರೆ. ಕಲುಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಬೀರಲಿಂಗೇಶ್ವರ ದೇವಸ್ಥಾನದ ಆಸ್ತಿಯನ್ನ ವಕ್ಫ್ ಎಂದು ಮಾಡಲಾಗಿತ್ತು. ದೇವಸ್ಥಾನದ ಆಸ್ತಿ ಎಂದು ನ್ಯಾಯಾಲಯ ಆದೇಶಿಸಿದೆ. ವಾಪಾಸ್ ದೇವಸ್ಥಾನದ ಆಸ್ತಿಯೆಂದು ಮಾಡಲಾಗಿದೆ. ಇದನ್ನ ಹೊರತು ಪಡಿಸಿ ಇನ್ನು ಯಾವುದೇ ಆಸ್ತಿ ರೈತರದ್ದು, ದೇವಸ್ಥಾನದ್ದು ಆಗಿಲ್ಲವೆಂದರು. 

ಹಾವೇರಿಯಲ್ಲಿ ಮುಸ್ಲೀಂ ಮನೆಯ ಮೇಲೆ ದಾಳಿ ನಡೆಯಿತು. ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳಲಿದೆ ಎಂದಿದ್ದೆ ಎಸ್ಪಿಯವರಿಗೆ ಏನು ಅನಿಸಿತು ಗೊತ್ತಿಲ್ಲ ಕೇಸ್ ಹಾಕಿದರು. ಏನು ತಪ್ಪಿದೆ ಎಂದು ಎಸ್ಪಿ ಅವರು ಹೇಳಲಿ. ದಂಗೆ ಏಳ ಬಹುದು ಎಂದಿದ್ದು ತಪ್ಪಾ? ಎಂದು ಪ್ರಶ್ನಿಸಿದರು‌.

ಬಾಂಗ್ಲಾದಲ್ಲಿ ಇಸ್ಕಾನ್ ಮತ್ತು ಹಿಂದೂಗಳ ಮೇಲೆ ದಾಳಿ ನಡೆದಿದೆ. ಸಂತರನ್ನ ಜೈಲಿಗೆ ಹಾಕಲಾಗಿದೆ. ವಕೀಲ ರಾಮನ್ ನನ್ನ ಹಲ್ಲೆ ಮಾಡಲಾಗಿದೆ. ಅವರನ್ನ ಆಸ್ಪತ್ರೆಗಳಲ್ಲಿ ಸೇರಿಸಿಕೊಳ್ಳಲಿಲ್ಲ. ಬಾಂಗ್ಲಾ ಮುಸ್ಲೀಂರ ರಾಕ್ಷಸೀಯ ಕೃತ್ಯವಮ್ನ ಖಂಡಿಸಿದ್ದಕ್ಕೆ ಎಸ್ ಡಿಪಿಐ ನನ್ನ ವಿರುದ್ಧ ಪ್ರತಿಭಟಿಸಿದ್ದಾರೆ. 

ಘಟನೆಯನ್ನ ಖಂಡಿಸ ಬೇಕಿದ್ದ ಸಂಘನೆ ನನ್ನ ವಿರುದ್ಧ ಪ್ರತಿಭಟಿಸಿದೆ. ಬಾಂಗ್ಲಾದ ಮುಸ್ಲೀಂರ ವಿರುದ್ಧ ಮಾತನಾಡಿದ್ದಕ್ಕೆ ಇವರಿಗೇಕೆ ಪ್ರೀತಿ. ನನ್ನ ಮೇಲೆ ನೂರು ಎಫ್ಐಆರ್ ಹಾಕಿದರೆ ಹೆದರೊಲ್ಲ. ಎಸ್ ಡಿಪಿಐ ಉತ್ತರ ನೀಡಲಿ ರಾಷ್ಟ್ರಭಕ್ತ ಮುಸ್ಲೀಂರನ್ನ ಅನ್ನ ಹಾಕೋ ಮನೆಗೆ ಕನ್ನ ಹಾಕೋರು ಎನ್ನಲಿಲ್ಲ. ಅನ್ನ ಹಾಕಿದವರನ್ನ ಹಲ್ಲೆ ಮಾಡಿದವರಿಗೆ ಹೇಳಿದ್ದೇನೆ ಎಂದರು. 

ಕಾನೂನು ಹೋರಾಟ ಮಡುವೆ. ಹಿಂದೆ ಕಾನೂನು ಹೋರಾಟ ಮಾಡಿ ಗೆದ್ದಿರುವೆ. ಕೋರ್ಟ್ ಜಾಮೀನು ಪಡೆಯುವೆ. ಎಸ್ಪಿ ಮೇಲೆ ಕೇಸ್ ಹಾಕಲಾ?  ಅವರ ಮೇಲೆ ಕೇಸ್ ಹಾಕಬೇಕಾಗುತ್ತದೆ. ಶಾಂತಿ ಕಾಪಾಡುವಲ್ಲಿ ಜೀವನ ಕಳೆದಿರುವೆ. ಯಾರ ತೃಪ್ತಿ ಪಡಿಸಲು ಕೇಸ್ ಹಾಕ್ತಾರೆ? ಎಂದು ಗರಂ ಆದ ಈಶ್ವರಪ್ಪ ಇದೇ ರೀತಿ ಮಾತನಾಡುತ್ತೇನೆ ಧರ್ಮ ದ್ರೋಹಿ, ದೇಶದ್ರೋಹಿಗಳ ವಿರುದ್ಧ ನಿರಂತರವಾಗಿ ಹೇಳುವೆ. ಹಾಗಂತ ಎಸ್ಪಿಯವರ ವಿರುದ್ಧ ಸಮರ ಸಾರುವುದಿಲ್ಲ. ಅವರಿಗೆ ನಾನು ಮಾತನಾಡೋದು ಗೊತ್ತಿಲ್ವಾ ಎಂದು ಗುಡುಗಿದರು. 

ಎಸ್ ಡಿಪಿಐ ಬಿಟ್ಟರೆ ಬೇರೆಯವರು ಖಂಡಿಸಿಲ್ಲ. ಖರ್ಗೆ ಅವರು ಆರ್ ಎಸ್ ಎಸ್ ವಿಷ ಸರ್ಪ ನೇರವಾಗಿ ಕೊಲ್ಲಲಿ ಎಂದಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ.  ಹಿಂದುತ್ವ ಎಂಬುದು ರೋಗ ಎಂದು ಮಾಜಿ ಸಿಎಂ ಪುತ್ರ ಇಲ್ತೀಜಾ ಮುಫ್ತಿ ಹೇಳಿದ್ದಾರೆ ಅವರಿಗೆ ಏನು ರೋಗ ಬಂದಿದೆ ಗೊತ್ತಿಲ್ಲ. ಇವರ ವಿರುದ್ಧ ಯಾಕೆ ಕ್ರಮವಿಲ್ಲ. ಇದನ್ನ ಒಬ್ಬ ಕಾಂಗ್ರೆಸಿಗರು ಮತ್ತು ಮುಸ್ಲೀಂರು ಖಂಡಿಸಿಲ್ಲ. ಇದೇ ರೀತಿ ಇಸ್ಲಾಂ ಎಂಬುದು ರೋಗ ಎಂದರೆ ಇಷ್ಟು ಹೊತ್ತಿಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು  ಎಂದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close