ಸುದ್ದಿಲೈವ್/ಶಿವಮೊಗ್ಗ
ಎರಡು ಪ್ರತ್ಯೇಕ ನಾಪತ್ತೆ ಪ್ರಕರಣಗಳು ಒಂದೇ ಠಾಣ ವ್ಯಾಪ್ತಿಯಿಂದ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಓರ್ವ ಪುರುಷ ಮತ್ತೊಂದ ವಿವಾಹಿತ ಮನಹಿಳೆ ಕಾಣೆಯಾಗಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
38 ವರ್ಷ ಮಹಿಳೆಯೋರ್ವರು ಆಯನೂರು ವಾಸಿ ಸಮೀವುಲ್ಲಾರೊಂದಿಗೆ ಮದುವೆಯಾಗಿದ್ದರು. ಅವರಿಗೆ ಮೂವರು ಮಕ್ಕಳಿದ್ದು 13 ವರ್ಷದ ಹಿಂದೆ ಸಮಿವುಲ್ಲಾ ಸಾವನ್ನಪ್ಪಿದ್ದ ಕಾರಣ ಮಹಿಳೆ ವಾಪಾಸ್ ತವರು ಮನೆಗೆ ಬಂದಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಕೆಲಸಮಾಡಿಕೊಂಡಿದ್ದರು.
ಸಮೀವುಲ್ಲಾ ತೀರಿಕೊಂಡ ನಂತರ ಇಲಿಯಾಜ್ ನಗರದ ನಿವಾಸಿಗಳು ಮಹಿಳೆಯ ಸಹೋದರನ ಬಳಿ ಬಂದು ನಮಗೆ ಮಕ್ಕಳಿಲ್ಲ. ಮಕ್ಕಳಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹಾಗಾಗಿ ನಮ್ಮ ಯಜಮಾನರು ವಿಧವೆಯನ್ನ ಮದುವೆ ಮಾಡಿಕೊಳ್ಳಲು ಸಿದ್ದರಿದ್ದು ನೀವು ನಿಮ್ಮ ಸಹೋದರಿಯನ್ನ ಒಪ್ಪಿಸಿದರೆ ನಿಮ್ಮ ಸಹೋದರಿ ಮತ್ತು ಮಕ್ಕಳ ಭವಿಷ್ಯ ಒಳ್ಳೆಯದಾಗಲಿದೆ ಎಂದರು.
ಮಹಿಳೆಯ ಸಹೋದರರಿಗೂ ಪ್ರಸ್ತಾವನೆ ಸರಿಯಾಗಿ ಕಂಡು ಬಂದ ಕಾರಣ ಮದುವೆಗೆ ಒಪ್ಪಿಗೆ ನೀಡಿ ಮದುವೆಯಾಗಿದ್ದರು. ಆದರೆ ಎರಡನೇ ಮದುವೆಯಾದ ವ್ಯಕ್ತಿಗೆ ಮೊಬೈಲ್ ನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರೆಎಂದು ಮೊದಲೆ ಪತ್ನಿಯೊಂದಿಗೆ ಹೋಗಿದ್ದರು.
ಸಹೋದರ ವಾಸಿಸುವ ಬೊಮ್ಮನ್ ಕಟ್ಟೆಗೆ ಬಂದು ವಾಸುವಾಗು ನಮ್ಮ ಕಣ್ಣೆದುರೆ ಇರ್ತಿಯ ಎಂದು ಸಲಹೆ ನೀಡಿದ್ದರು. ಯಾವುದೋ ಹುಡುಗನ ವಾಹನವನ್ನ ಎಕ್ಸಚೇಂಜ್ ಮಾಡಿಕೊಂಡು ಬಂದಿದ್ದು, ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿದವರು ವಾಪಾಸ್ ಆಗಿಲ್ಲವೆಂದು ದೂರು ದಾಖಲಾಗಿದೆ.
ಅದರಂತೆ ಶಿಕಾರಿಪುರದ ಮಂಚಿಕೊಪ್ಪದ ನಿವಾಸಿ ಮಾರುತಿ ಎಂಬುವರಿಗೆ ಪೀಡ್ಸ್ ಕಾಣಿಸಿಕೊಂಡು ಬಾಯಿಯಲ್ಲಿ ತೀವ್ರಗಾಯವಾಗಿತ್ತು. ಕಾರಣ ಡಿ. 23 ರಂದು ಮೆಗ್ಗಾನ್ ಗೆ ಬಂದು ದಾಖಲಾಗಿದ್ದರು. ಡಿ.25 ರಂದು ವಾರ್ಡ್ ನಿಂದಲೇ ನಾಪತ್ತೆಯಾಗಿದ್ದಾರೆ. ನಾಪತ್ತೆ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.