ಅಲೆಮಾರಿ ನಿಗಮಕ್ಕೆ ಬಂದಿರುವ ಕೋಟಿಗಟ್ಟಲೆ ಹಣ ನುಂಗುವ ಯತ್ನ, ಚಾವಡಿ ಲೋಕೇಶ್ ನಿಂದ ತನಿಖೆಗೆ ಆಗ್ರಹ



ಸುದ್ದಿಲೈವ್/ಶಿವಮೊಗ್ಗ

ಕೇಂದ್ರ ಸರ್ಕಾರ ಅಲೆಮಾರಿಗಳ ಸಮೀಕ್ಷೆಗೆ ಬಿಡುಗಡೆ ಮಾಡಿರುವ ಅನುದಾನದ ಕೋಟಿಗಟ್ಟಲೆ ಹಣ ನುಂಗುವ ಸಂಚು ನಡೆದಿದ್ದು ಈ ಬಗ್ಗೆ ತನಿಖೆ ನಡೆಸಬೇಕೆಂದು ಚಾವಡಿ ಲೋಕೇಶ್ ಆಗ್ರಹಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಸರ್ವೆಗೆ ಕೇಂದ್ರ ಸರ್ಕಾರ 6 ಕೋಟಿ ಹಣ ಬಿಡುಗಡೆಯಾಗಿದೆ. ಈ  ಬಗ್ಗೆ ಅಲೆಮಾರಿ ಸಂಘಟನೆಯಾಗಲಿ, ಸಚಿವರಿಗಾಗಲಿ ಮಾಹಿತಿ ಇಲ್ಲ. ಸುವರ್ಣ ಸೌಧದ ಬಳಿ ಪ್ರತಿಭಟನೆ ಮಾಡಿದಾಗ ಸರ್ವೆಗೆ ಹಣ ಬಿಡುಗಡೆಯಾಗಿರುವುದು ತಿಳಿದು ಬಂದಿದೆ. 

ಈ ಬಗ್ಗೆ ಅಲೆಮಾರಿ ನಿಗಮದ ಅಧ್ಯಕ್ಷೆ ಪಲಗಲವಿಯವರಿಗೆ ಕೇಳಿದಾಗ ನಮ್ಮ‌ಬಳಿ ವಿಷಯಗೊತ್ತಿಲ್ಲ ಎಂದಿದ್ದಾರೆ. ಮತ್ತೊಬ್ಬರ ಬಳಿ ಸರ್ವೆಗೆ ಹಣ ಬಂದಿದೆ ಎಂದಿದ್ದಾರೆ. ಎರಡು ರೀತಿಯ ಉತ್ತರಗಳು ಗೊಂದಲ ಮೂಡಿಸಿವೆ. ಅಲೆಮಾರಿ ಸಮಾಜದ ನಿಗಮ ಹುಟ್ಟುಹಾಕಲು ಹೋರಾಡಿದವರು ನಾವು. ಆದರೆ ನಮಗೆ ಗೊತ್ತಿಲ್ಲದ ಹಾಗೆ 6 ಕೋಟಿ ಹಣದ ಬಗ್ಗೆ ನಿಗಮದ ಅಧ್ಯಕ್ಷರ ಗೊಂದಲ ಹೇಳಿಜೆ ಹಲವು ಅನುಮಾನಗಳನ್ನ ಮೂಡಿಸಿವೆ. 

ಈ ಹಣ ನುಂಗುವ ವಿಚಾರದಲ್ಲಿ ಬಿಜೆಪಿಯ ಕೆಲ ಮುಖಂಡರ ಸಂಚು ಸಹ ನಡೆದಿರುವ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಸಿಬಿಐ, ಲೋಕಾಯುಕ್ತ ಅಥವಾ ರಿಟೈರ್ಡ್ ಜಡ್ಜ್ ನಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close