ಸುದ್ದಿಲೈವ್/ಶಿವಮೊಗ್ಗ
ಅಧೀವೇಶನದ ಸಮಯವನ್ನು ವಿಪಕ್ಷ ನಾಯಕರು ವ್ಯರ್ಥ ಹಾಳು ಮಾಡುತಿದ್ದಾರೆ. ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿತ್ತು ಆದರೆ ಯಾವುದೆ ವಿಷಯಗಳು ಚರ್ಚೆ ಆಗಲಿಲ್ಲ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚರ್ಚೆಯಲ್ಲಿ ಭಾಗವಹಿಸಲು ಸ್ಪೀಕರ್ ಸಹ ಮನವಿ ಮಾಡಿದ್ದಾರೆ. ಅಧಿವೇಶನದ ಸಮಯ ವ್ಯರ್ಥವಾಗಿದೆ ಯಾವುದೇ ಬಿಲ್ ಗಳು ಪಾಸ್ ಆಗಲಿಲ್ಲ. ನಿನ್ನೆ ಸಂಸದರ ಸಭೆ ಸಹ ಆಯ್ತು ಎಂದು ವಿವರಿಸಿದರು.
ರಾಜ್ಯ ಬಿಜೆಪಿ ಬೆಳವಣಿಗೆ ಕುರಿತು ಚರ್ಚೆ ಆಯ್ತು. ಶೀಘ್ರದಲ್ಲೇ ಎಲ್ಲವೂ ಕೂಡ ಇತ್ಯರ್ಥ ಆಗಲಿದೆ. ಕಾರ್ಯಕರ್ತರು ಲಕ್ಷಾಂತರ ಸದಸ್ಯತ್ವ ಅಭಿಯಾನ ಮಾಡಿದ್ದಾರೆ. ಮೇಲ್ಮಟ್ಟದಲ್ಲಿ ಈ ರೀತಿಯ ಗೊಂದಲಗಳ ಹೇಳಿಕೆಯಿಂದ ಕಾರ್ಯಕರ್ತರಿಗೆ ನೋವಾಗುತ್ತೆ ಎಂದು ಹೇಳಿದರು.
ಆದಷ್ಟು ಬೇಗ ಹೈ ಕಮಾಂಡ್ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದೇವೆ. ಎಲ್ಲಾ ವಾತಾವರಣ ತಿಳಿಯಾಗುತ್ತಿದೆ ಒಳ್ಳೆಯದಾಗುತ್ತೆ ಅಂತ ಅನಿಸುತ್ತೆ ಎಂದರು.
ಬಿಜೆಪಿಯಿಂದ ವಕ್ಫ್ ವಿಚಾರವಾಗಿ ಹೋರಾಟ ನಡೆಯುತ್ತಿದೆ. ಐಲ್ಯಾಂಡ್ ಗೆ ಐಲ್ಯಾಂಡೆ ನಮ್ಮದು ಎನ್ನುತ್ತಿದ್ದಾರೆ. ಮುಡಾ ಹಗರಣ ಮರೆಮಾಚಲು ಸಮಾವೇಶ ಮಾಡುತ್ತಿದ್ದಾರೆ. ಇಡಿ ಮಧ್ಯ ಪ್ರವೇಶವನ್ನು ಸಿಎಂ ಹಾಸ್ಯಾಸ್ಪದ ಮಾಡಿದ್ದಾರೆ. ಇದು ಸಿಎಂ ಅವರಿಗೆ ಶೋಭೆ ತರುವುದಿಲ್ಲ ಎಂದು ಬಿವೈಆರ್ ತಿಳಿಸಿದರು.