ಸುದ್ದಿಲೈವ್/ಶಿವಮೊಗ್ಗ
ಸಿಟಿ ಕೋ ಆಪರೇಟಿವ್ ಬ್ಯಾಂಕ್‍ನ ನಿರ್ದೇಶಕರ ಸ್ಥನಾದ ಚುನಾವಣೆಗೆ ನಗರದ ವಿವಿಧೆಡೆ ಕಾರ್ಯಕರ್ತರೊಂದಿಗೆ ಜಿ.ಹೆಚ್.ಪ್ರೇಮ ಚಂದ್ರಶೇಖರ್ ಅವರು ಅಬ್ಬರದ ಪ್ರಚಾರ ನಡೆಸಿದರು.
ನಗರದ ಕೋಟೆ ರಸ್ತೆಯ ಪ್ರತಿಷ್ಠಿತ ಸಿಟಿ ಕೋ ಆಪರೇಟಿವ್ ಬ್ಯಾಂಕ್‍ನ ನಿರ್ದೇಶಕರ ಚುನಾವಣೆ ಡಿ.29 ರಂದು ನಡೆಯಲಿದ್ದು, ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿರುವ ನನ್ನನ್ನು ಗೆಲ್ಲಿಸಿ ಎಂದು ಮಹಿಳಾ ಮೀಸಲು ಸ್ಥಾನದ ಅಭ್ಯರ್ಥಿ ಜಿ.ಹೆಚ್.ಪ್ರೇಮ ಚಂದ್ರಶೇಖರ್ ಅವರು ಮತದಾರರಲ್ಲಿ ಮನವಿ ಮಾಡಿದರು.
ಸಿಟಿ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ ಮಹಿಳಾ ಮೀಸಲು ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತಿದ್ದೇನೆ, ನನ್ನ ಗುರುತು ಕಿರೀಟ ಆಗಿದ್ದು, ಕ್ರಮ ಸಂಖ್ಯೆ 30 ಆಗಿದೆ. ದಯಮಾಡಿ ಗೆಲ್ಲಿಸಿ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು. ಬ್ಯಾಂಕ್‍ನ್ನು ಮತ್ತಷ್ಟು ಸದೃಢಗೊಳಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಮ್ಮ ಅತ್ಯಮೂಲ್ಯ ಮತವನ್ನು ನೀಡಿ ಎಂದು ಮತದಾರರಲ್ಲಿ ಕಳಕಳಿ ಮನವಿ ಮಾಡಿದರು