ಸುದ್ದಿಲೈವ್/ಶಿವಮೊಗ್ಗ
ಸಾಲದ ಅವಧಿಯಲ್ಲಿ ಗೊಂದಲ ಮೂಡಿದ ಕಾರಣ ಖಾಸಗಿ ಫೈನಾನ್ಸ್ ವೊಙದು ಗ್ರಾಪಂ ಸದಸ್ಯೆಯ ಮನೆಯನ್ನೇ ಲಾಕ್ ಮಾಡಿಕೊಂಡು ಹೋಗಿ ಸದಸ್ಯೆಯ ಕುಟುಂಬವನ್ನ ಬೀದಿಗೆ ತಳ್ಳಿದೆ.
ಮೈದೊಳಲು ಗ್ರಾಪಂ ಸದಸ್ಯೆ ಅರ್ಪಿತಾ ೨೦೧೯ ತಮ್ಮ ವಾಸದ ಮನೆ ಮೇಲೆ ಖಾಸಗಿ ಪೈನಾನ್ಸ್ ಬ್ಯಾಂಕ್‌ನಲ್ಲಿ ೫ ಲಕ್ಷ ಸಾಲ ಪಡೆದಿದರು. ಪೈನಾನ್ಸ್ ಕಂಪನಿಯವರು ನೀಡಿದ ಗಡುವಿನಂತೆ ೫ ವರ್ಷ ಲೋನ್ ಪಾವತಿ ಮಾಡಿದ್ದಾರೆ. ಮನೆ ಸಾಲ ಮುಕ್ತಾಯವಾಗುತ್ತಿದೆ ಮತ್ತೇ ಸಾಲ ನೀಡುವುದಾಗಿ ಕೇಳಿದ್ದಾರೆ.
ಅದೇ ಮನೆ ಮೇಲೆ ಹೊಸದಾಗಿ ಲೋನ್ ಕೇಳಲೆಂದು ಬ್ಯಾಂಕಿಗೆ ಹೋದಾಗಿ ಬ್ಯಾಂಕ್ ಸಿಬ್ಬಂದಿ ೭ ವರ್ಷಕ್ಕೆ ಲೋನ್ ನೀಡಿರುವುದು ಇನ್ನೂ ಎರಡು ವರ್ಷ ಲೋನ್ ಪಾವತಿ ಮಾಡಬೇಕು ಎಂದಿದ್ದಾರೆ. ಅರ್ಪಿತಾಗೆ ಸಾಲ ಮಂಜೂರು ಮಾಡಿದ ಸಿಬ್ಬಂದಿಯನ್ನು ವಿಚಾರಿಸಿದ್ದಾಗ ಸಿಬ್ಬಂದಿಯೂ ೫ ವರ್ಷಕ್ಕೆ ಲೋನ್ ನೀಡಿದ್ದಾಗಿ ಹೇಳಿದ್ದಾರೆ. ತಾಂತ್ರೀಕ ಸಮಸ್ಯೆಯಿಂದ ಅವಧಿಯಲ್ಲಿ ವ್ಯತ್ಯಾಸವಾಗಿದೆ ಕೆಲ ದಿನಗಳ ನಂತರ ಬಂದು ಕ್ಲಿಯರೆನ್ಸ್ ತೆಗೆದುಕೊಂಡು ಹೊಸದಾಗಿ ಲೋನ್ ಮಾಡಿಸಿಕೊಳ್ಳುವಂತೆ ಹೇಳಿ ಕಳಿಸಿದ್ದಾರೆ.
ಇದಾದ ಕೆಲ ದಿನಗಳಲ್ಲೆ ಗ್ರಾಪಂ ಸದಸ್ಯೆ ಅರ್ಪಿತಾಳ ಪತಿ ರಾಜಪ್ಪನಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ದೈವದ ಮೊರೆ ಹೋದ ರಾಜಪ್ಪ ದೇವಸ್ಥಾನವೊಂದರಲ್ಲಿ ವಾಸ್ಥವ್ಯ ಹೂಡಿ ಪೂಜಾ ಕೈ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ. ಶುಕ್ರವಾರ ದಿಢೀರ್ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿ ಅರ್ಪಿತಳನ್ನು ಮನೆಯಿಂದ ಹೋರ ಕಳಿಸಿ ಮನೆ ಗೃಹ ಬಳಕೆಯ ಸಾಮಾನುಗಳನ್ನು ಹೋರ ಹಾಕಿ ಮನೆ ಬಾಗಿಲಿಗೆ ಸೀಲ್ ಮಾಡಿಕೊಂಡು ಹೋಗಿದ್ದಾರೆ. ಅರ್ಪಿತಾಳ ಅತ್ತೆಯು ಪತಿ ರಾಜಪ್ಪನೊಂದಿಗೆ ದೇವಸ್ಥಾನದಲ್ಲಿದ್ದಾರೆ. ಮನೆಗೆ ಬೀಗಾ ಹಾಕಿದರಿಂದ ದಿಕ್ಕೂ ಕಾಣದಾದ ಗ್ರಾಪಂ ಸದಸ್ಯೆ ಅಪಿರ್ತಾ ಮನೆ ಮುಂಭಾಗದಲ್ಲೆ ವಾಸ್ಥವ್ಯ ಆರಂಭಿಸಿದ್ದಾರೆ.