ರಾಷ್ಟೀಯ ಕರಾಟೆ ಪಂದ್ಯಾವಳಿ, ಶಿವಮೊಗ್ಗದ ಕ್ರೀಡಾಪಟುಗಳಿಂದ ಉತ್ತಮ ಸಾಧನೆ



ಸುದ್ದಿಲೈವ್/ಶಿವಮೊಗ್ಗ

ನವೆಂಬರ್ 30  ಮತ್ತು ಡಿಸೆಂಬರ್ 1, 2024 ರಂದು ಬನಾರಸ್ ಹಿಂದೂ ವಿಶ್ವ ವಿದ್ಯಾಲಯ  ವಾರಣಾಸಿ, ಉತ್ತರ ಪ್ರದೇಶ ಇಲ್ಲಿನ ಇಂಡೋರ್ ಸ್ಟೇಡಿಯಂ ಕರಾಟೆ ಇಂಡಿಯಾ  ಸಂಘಟನೆ ಹಾಗೂ ಶೋಟೊ ಕಾನ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ರಾಷ್ಟೀಯ ಕರಾಟೆ ಪಂದ್ಯಾವಳಿ 2024 ರಲ್ಲಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಸ್ಪರ್ಧೆ ಮಾಡಿದ ಕರ್ನಾಟಕ  ತಂಡ ದಿಂದ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಬಾಲಕ ಮತ್ತು ಬಾಲಕಿಯರ  ಹಾಗೂ ವಿವಿಧ ವಯೋಮಿತಿ ಯೊಳಗಿನ  ವಿಭಾಗ ದಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದು ರಾಜ್ಯ ಜಿಲ್ಲೆ ಹಾಗೂ ಓಧುತ್ತಿರುವ ಶಾಲೆಗೆ, ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿವರ ಇಂತಿದೆ.

ಬಾಲಕರ ವಿಭಾಗ.

ಶಾಶ್ವತ್ ಹೆಗಡೆ 8 ವರ್ಷ ಮತ್ತು 20 ಕೆಜಿ ಒಳಗಿನ ವಿಭಾಗದಲ್ಲಿ 2 ಕಂಚಿನ ಪದಕ ವಿಜೇತ ಆಗಿರುತ್ತಾನೆ. ಶರತ್ ಹೆಗಡೆ 10 ವರ್ಷ ಒಳಗಿನ 26ರಿಂದ 30 ಕೆಜಿ ವಿಭಾಗ ದಲ್ಲಿ ಚಿನ್ನ ಮತ್ತು ಕಂಚಿನ ಪದಕ ಪಡೆದಿರುತ್ತಾನೆ.

ಅರ್ಜುನ್. ಜಿ. 36 ರಿಂದ 40 ಕೆಜಿ ವಿಭಾದಲ್ಲಿ 2 ಬೆಳ್ಳಿಯ ಪದಕ ಗಳಿಸಿ ಜಯ ಶೀಲನಾಗಿರುತ್ತಾನೆ. ಶ್ರೀ ಜಯ್. ಜೆ. ಸೀನಿಯರ್ 21ವರ್ಷ ದೊಳಗಿನ ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾನೆ.

ಬಾಲಕಿಯರ ವಿಭಾಗ 

ಸಿದ್ಧಾಪುರ ತಾಲೂಕಿನ ಬಾಲಿಕೊಪ್ಪ ಸರ್ಕಾರಿ ಶಾಲೆಯ  ಗಾನವಿ ಎಂ ನಾಯಕ 31 ರಿಂದ 35 ಕೆಜಿ ಮತ್ತು 1ಡಬ್ಲ್ಯೂ ವರ್ಷದೊಳಗಿನ ವಿಭಾಗದಲ್ಲಿ 1  ಚಿನ್ನದ ಪದಕ ಹಾಗೂ 1 ಬೆಳ್ಳಿಯ ಪದಕ ಪಡೆದಿದ್ಧಾಳೆ.ಎವೇರನ್ ಇಂಟರ್ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ಆನವಟ್ಟಿ ಸೊರಬ ತಾಲೂಕಿನ ವಿದ್ಯಾರ್ಥಿನಿ ಆದ ದೀಪಿಕಾ ಸುಣಗಾರ 1 ಚಿನ್ನದ ಪದಕ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾಳೆ 

ಈ ಮೇಲ್ಕಂಡ ಎಲ್ಲ ಪದಕ ವಿಜೇತ ವಿದ್ಯಾರ್ಥಿಗಳಿಗೆ ಶಿವಮೊಗ್ಗ ಜಿಲ್ಲಾ ಶೋಟೊ ಕರಾಟೆ ಅಸೋಸಿಯೇಷನ್ ಅಧ್ಯಕ್ಷರು ಆದಂತ ಶ್ರೀ ಕುಮಾರ್ ವಿ ನಾಯಡು, ಉಪಾಧ್ಯಕ್ಷರು ಆದ ಶ್ರೀ ಚಂದನ್ ಎಂ ಪಟೇಲ್ ಹಾಗೂ ತರಭೇತಿದಾರರು ಮತ್ತು ಜಿಲ್ಲಾ ಪ್ರದಾನ ಕಾರ್ಯದರ್ಶಿ ಆದಂತ ಶಿಹಾನ್ ಚಂದ್ರಕಾಂತ್. ಜಿ. ಅಭಿನಂದನೆಗಳನ್ನು ತಿಳಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close