ಬೈಕ್ ಗಳ‌ಮುಖಾಮುಖಿ ಡಿಕ್ಕಿ



ಸುದ್ದಿಲೈವ್/ಶಿರಾಳಕೊಪ್ಪ

ಪಟ್ಟಣದ ಸೊರಬ ರಸ್ತೆಗೆ ತೆರಳುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತ ನಿನ್ನೆ ಸಂಜೆ ಸಂಭವಿಸಿದ್ದು, ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗಿನ ಜಾವ ಮೃತ ಪಟ್ಟ ಘಟನೆ ವರದಿಯಾಗಿದೆ. 

ಶಿರಾಳಕೊಪ್ಪದುಂದ ಸೊರಬ ರಸ್ತೆಯಲ್ಲಿ ಬರುವ ವರ್ಷ ಆಗ್ರೋ ಮ್ಯಾಪ್ ಶಾಪ್ ನ ಎದುರುಗಡೆ ಕೆಎ15 ಇಎ 7383 ಕ್ರಮ ಸಂಖ್ಯೆಯ ಬೈಕ್ ನಲ್ಲಿ ತೆರಳುತ್ತಿದ್ದ ಕೋಲುಗುಣಸಿ ಗ್ರಾಮದ ವ್ಯಕ್ತಿಗೆ ಆನವಟ್ಟಿ ವೃತ್ತದ ಬಳಿ ಏಕಾಏಕಿ ಜುಪಿಟರ್ ಬೈಕ್ ಸವಾರ ಎದುರಿನಿಂದ ಬಂದ ಕಾರಣ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಲ್ಲಿ ಕೆಎ15 ಇಎ 7383 ಬೈಕ್ ಸವಾರನ ತಲೆಗೆ ಗಾಯವಾಗಿದೆ. 

ತಕ್ಷಣವೇ ಗಾಯಗೊಂಡ ಬೈಕ್ ಸವಾರನನ್ನ ಶಿರಾಳಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚಿನ‌ ಚಿಕಿತ್ಸೆಗಾಗಿ ಮೆಗ್ಗಾನ್ ಗೆ ಕರೆದುಕೊಂಡು ಹೋಗಲು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಶಿವಮೊಗ್ಗದ ಖಾಸಗಿ‌ ಆಸ್ಪತ್ರೆಯಲ್ಲಿ ಗಾಯಗೊಂಡ ಬೈಕ್ ಸವಾರನನ್ನ ದಾಖಲಿಸಲಾಗಿತ್ತು. ವೈದ್ಯರು ತಲೆಗೆ ಪೆಟ್ಟು ಬಿದ್ದ ಕಾರಣ ಬದುಕುಳಿಯುವುದು ಕಷ್ಟ ಎಂದಿದ್ದಾರೆ. 

ಇಂದು ಬೆಳಿಗ್ಗೆ 5-45 ರ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನ ಚೆನ್ನಬಸಪ್ಪ (55) ಎಂದು ಗುರುತಿಸಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close