ಸುದ್ದಿಲೈವ್/ಶಿವಮೊಗ್ಗ
ಕುಟುಂಬಸ್ಥರು ಮದುವೆಗೆ ತೆರಳಿದ ವೇಳೆ ಜೆಂಚು ತೆಗೆದು ಕನ್ನ ಹಾಕಿರುವ ಘಟನೆ ಸೂಗೂರಿನಲ್ಲಿ ನಡೆದಿದೆ. ತಡರಾತ್ರಿ ಮದುವೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಸೂಗೂರಿನ ವಿರುಪಸಕ್ಷಪ್ಪ ಎಂಬುವರ ಮನೆಯವರು ಮದುವೆಗೆ ತೆರಳಿದ ವೇಳೆ ಬಿರುವಿನಲ್ಲಿ ಇಟ್ಟ 50 ಗ್ರಾಂ ಬಂಗಾರವನ್ನ ಕಳ್ಳರು ಕದ್ದೊಯ್ದಿದ್ದಾರೆ.
ಮನೆಯ ಹಿಂಬಂದಿಯಿಂದ ಏಣಿ ಹಾಕಿ ಹಂಚು ತಗೆದು ಮನೆ ಒಳಗೆ ನುಗ್ಗಿದ ಕಳ್ಳರು ಕಳ್ಳತನ ಮಾಡಿದ್ದಾರೆ. ಅಕ್ಕಪಕ್ಕದ ಮನೆಯವರೂ ಸಹ ಮದುವೆಗೆ ತೆರಳಿದ್ದರು. ಯಾರು ಇಲ್ಲದ ವೇಳೆ ಕಳ್ಳತನ ಮಾಡಿದ್ದಾರೆ.. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.