ಸುದ್ದಿಲೈವ್/ಶಿವಮೊಗ್ಗ
ಮತ್ತೆ ಸಂವಿಧಾನದ ಬಗ್ಗೆ ಮಾತನಾಡಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಸಂವಿಧಾನಬದ್ದವಾಗಿ ನಡೆದರೆ ದೇವರು ಮೆಚ್ಚುತ್ತಾನೆ ಎಂದಿದ್ದಾರೆ.
ಇಂದು ಮಾಜಿ ಡಿಸಿಎಂ ಈಶ್ವರಪ್ಪನವರ ಮನೆಯಲ್ಲಿ ಪುತ್ರ ಕಾಂತೇಶ್ ನವರ 19 ನೇ ವೈವಾಹಿಕ ಜೀವನದ ಸಂಭ್ರಮ ಹಾಗೂ ಬಾಲಕೃಷ್ಣನ ಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುವ ಸಂಧರ್ಭದಲ್ಲಿ ಈ ಮಾತನು ನುಡಿದರು.
ಮೋಸ,ಅವ್ಯವಹಾರ,ಇಲ್ಲದ ವೃತ್ತಿ ಜೀವನ ನಿಜವಾದ ದೇವರ ಪೂಜೆಯಾಗಲಿದೆ. ಉಳಿದರ್ಧ ಹೊತ್ತು ಮಾಡುವ ದೇವರ ಪೂಜೆ ನಮ್ಮಕೆಲಸಕ್ಕೆಸಿಗುವ ಸ್ಪೂರ್ತಿಯಾಗಲಿದೆ. ಸಂವಿಧಾನದೊಳಗಿನ ಭಕ್ತಿ ಅನುಷ್ಠಾನವಾಗಬೇಕಿದೆ ಎಂದರು.
ದುಡಿಮೆ ನಿರಂತರವಾಗಿರುತ್ತದೆ. ಪ್ರಯತ್ನ ಎಷ್ಟು ಮುಖ್ಯವೋ ಅಷ್ಟೇ ದೇವರ ಆಶೀರ್ವಾದವೂ ಮುಖ್ಯವಾಗಿದೆ. ದೇವರ, ಮತ್ತು ಭಕ್ತರ ನಡುವಿನ ಸಂವಾಹನ ಭಜನೆಯಾಗಿದೆ. ರಾಷ್ಟ್ರಮುದ್ರೆ ಬಿದ್ದ ಕಾಗದದ ಚೂರಿಗೆ ಬೆಲೆ ಜಾಸ್ತಿ ಹಾಗೆ ಭಕ್ತಿ ಮುದ್ರೆ ಬಿದ್ದ ಭಾವವಕ್ಕೆ ಬೆಲೆ ಹೆಚ್ಚು ಎಂದರು.
ದಾಸವರೇಣ್ಯರು ಹೇಳಿಕೊಟ್ಟ ಕೀರ್ತನೆಗಳು ಭಕ್ತಿಯನ್ನ ಜಾಗೃತಿಗೊಳಿಸುತ್ತದೆ. ರೇಡಿಯೋ ಬರುವ ಮುಂಚೆ ಸಂಜೆಯ ಹೊತ್ತಿಗೆ ಪ್ರತಿ ಮನೆಗಳಲ್ಲಿ ಭಜನೆ ಮತ್ತು ತಾಳಶಬ್ಧ ಕೇಳಿಬರುತ್ತಿತ್ತು. ರೇಡಿಯೋ ಬಂದಾಗ ರೇಡಿಯೋ ಮುಂದೆ, ಟಿವಿ ಬಂದಾಗ ಟಿವಿ ಮುಂದೆ ಕೂರಲು ಜನ ಆರಂಭಿಸಿದ ಪರಿಣಾಮ ಭಜನೆಗಳ ಬದಲು ಸಿನಿಮಾ ಹಾಡು ಮತ್ತು ಧಾರವಾಹಿಗಳನ್ನ ಹಾಡಲು ಆರಂಭಿಸಿದವು. ಬದುಕಿನ ಉದ್ದಕ್ಕೂ ದೇವರ ಪೂಜೆ ನಡೆಯಬೇಕು. ವೃತ್ತಿಯನ್ನೇ ದೇವರ ಕೆಲಸ ಮಾಡಿದಾಗ ಬದುಕು ಸಾರ್ಥಕ ಸಾಧ್ಯ ಎಂದರು.
ಭಜನೆ ಆರಾಧನೆ ಒಂದು ಕಡೆಯಾದರೆ ಅದರಿಂದ ಸ್ಪೂರ್ತಿ ಪಡೆದು ಬದುಕು ಸಾರ್ಥಕವಾಗಲಿದೆ. ಕಾಂತೇಶ್ಅವರ19 ನೇವರ್ಷದ ವೈವಾಹಿಕ ಜೀವನಕ್ಕೆ ಶುಭಕೋರಿದರು.