ಫ್ಲೆಕ್ಸ್ ಗಳನ್ನ ಕಿತ್ತು ಬಿಸಾಕಿದ ಪಾಲಿಕೆ!


 ಸುದ್ದಿಲೈವ್/ಶಿವಮೊಗ್ಗ

ಪಾಲಿಕೆ ಅಧಿಕಾರಿಗಳು ಇಂದು ದಿಡೀರ್ ಎಂದು ಮೈಕೊಡವಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ. ಪ್ರಮುಖ ಬೀದಿಗಳಲ್ಲಿ ಪಾಲಿಕೆಯ ಹೆಲ್ತ್ ಇನ್ ಸ್ಪೆಕ್ಟರ್ ಗಳು ಫ್ಲೆಕ್ಸ್ ತೆರವಿಗೆ ಮುಂದಾಗಿದ್ದಾರೆ. 

ಬೆಳ್ಳಂಬೆಳಿಗ್ಗೆ ಪಾಲಿಕೆ ಬಿಹೆಚ್ ರಸ್ತೆ, ನೆಹರೂ ರಸ್ತೆ, ಬಾಲರಾಜ್ ಅರಸ್ ರಸ್ತೆ, ಕುವೆಂಪು ರಸ್ತೆ, ಎನ್ ಟಿ ರಸ್ತೆಯಲ್ಲಿ ಪಾಲಿಕೆ ಅಧಿಕಾರಿಗಳು ಫ್ಲೆಕ್ಸ್ ತೆಗೆಸಿದ್ದಾರೆ. ಇಂದು ಉಪಲೋಕಾಯುಕ್ತರು ಶಿವಮೊಗ್ಗ ನಗರಕ್ಕೆ ಭೇಟಿ ನೀಡಲಿದ್ದು, ಇದರ ಬೆನ್ನಲ್ಲೇ ಪಾಲಿಕೆ ಅಧಿಕಾರಿಗಳು ಫ್ಲೆಕ್ಸ್ ತೆಗೆಸಿದ್ದಾರೆ ಎಂಬ ಸುದ್ದಿ ಹರಡಿತ್ತು. 

ಆದರೆ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿಯವರಾಗಲಿ ಮತ್ತು ಪಾಲಿಕೆ ಇನ್ ಸ್ಪೆಕ್ಟರ್ ಗಳು ಉಪಲೋಕಾಯುಕ್ತ ವೀರೇಶ್ ಭೇಟಿಗೂ ಫ್ಲೆಕ್ಸ್ ರಿಮೂವ್ ಮಾಡಿರುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಫ್ಲೆಕ್ಸ್ ನಿಂದ ಊರಿನ ಅಂದಚಂದ ಮಾತ್ರವಲ್ಲ ವಾಹನ ಸವಾರರಿಗೂ ಅಡ್ಡಿ ಉಂಟಾಗಲಿದೆ. 

ಫ್ಲೆಕ್ಸ್ ಹಾಕಲೂ ರಾಜಕೀಯವಿದೆ. ನಿರ್ದಿಷ್ಟ ಜಾಗದಲ್ಲಿ ಫ್ಲೆಕ್ಸ್ ಹಾಕಲು ಪೈಪೋಟಿಗಳಿವೆ. ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ಪಾಲಿಕೆ ಟೆಂಡರ್ ಕರೆದು ಜಾಹೀರಾತು ಪ್ರಕಟಿಸಿ ಆದಾಯ ಹರಚ್ಚಿಸಿಕೊಳ್ಳಲಿದೆ. ಅದಕ್ಕೆ ಕಾನೂನುವಿದೆ. ಆದರೆ ನಗರದ ಪ್ರಮುಖ ಎಕ್ಕಲೆಗಳಲ್ಲಿ ಫ್ಲೆಕ್ಸ್ ಅಳವಡಿಕೆ ಅವಕಾಶವಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ ಸಹ ಸ್ಪಷ್ಟ ನಿರ್ದೇಶನವಿದ್ದರೂ ಅಳವಡಿಕೆಗೆ ಅವಕಾಶ ನೀಡಿರುವುದು ಅಚ್ಚರಿಯೇ ಸರಿ. ಈ ಹಿನ್ಬಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಇಂದು ಖಡಕ್ ಕಾರ್ಯಾಚರಣೆ ನಡೆಸಿರುವುದು ಸ್ವಾಗತಾರ್ಹ. ಐವತ್ತಕ್ಕೂ ಹೆಚ್ಚು ಫ್ಲೆಕ್ಸ್ ಗಳನ್ನ ಪಾಲಿಕೆ ಆರೋಗ್ಯ ಅಧಿಕಾರಿಗಳು ಕಿತ್ತು ಬಿಸಾಕಿದ್ದಾರೆ. 

ರಾಜಕೀಯ, ಹುಟ್ಟುಹಬ್ಬದ ವಿಶಸ್ ಗಳೇ ಅಧಿಕವಿದ್ದ ಫ್ಲೆಕ್ಸ್ ಗಳನ್ನ ಕೀಳಲಾಗಿದೆ. ಹೀಗೆ ಖಡಕ್ ಕಾರ್ಯಾಚರಣೆಯಿಂದಲೇ ಜನರಿಗೆ ಜಾಗೃತಿ ಮೂಡಿಸುವ‌ಅಗತ್ಯವಿದೆ. ಸಾಮಾನ್ಯ ಜನರಿಗೆ ಇದು ಸಂಬಂಧವಿಲ್ಲ. ಆದರೆ ರಾಜಕಾರಣಿಗಳಿಂದಲೇ ಕಾನೂರು ಹೆಚ್ಚು ದುರ್ಬಳಕೆ ವಾಗುತ್ತಿರುವುದು ಕಂಡು ಬರುತ್ತಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close