ಸುದ್ದಿಲೈವ್/ಶಿವಮೊಗ್ಗ
ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ಘಟನೆಯೊಂದು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಈ ಘಟನೆ ವಿದ್ಯಾರ್ಥಿನಿ ಯಾಕೆ ಹೀಗೆ ಮಾಡಿದಳು ಎಂಬ ಗೊಂದಲಕ್ಕೂ ಈಡು ಮಾಡಿದೆ.
ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಹೊರಜಿಲ್ಲೆಯಿಂದ ಬಂದು ವ್ಯಾಸಂಗ ಮಾಡುತ್ತಿದ್ದರು. ಆದರೆ ನಿನ್ನೆ ವಾಶ್ ರೂಮ್ ಗೆ ತೆರಳಿದ ವಿದ್ಯಾರ್ಥಿನಿ ದಿಡೀರ್ ಎಂದು ಪೊಲೀಸ್ ಠಾಣೆಗೆ ತೆರಳಿ ಇಬ್ವರು ಅನ್ಯಕೋಮಿನ ಯುವತಿಯರು ನನ್ನ ಬೆತ್ತಲೆಯ ಶೂಟಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ ಎಂದು ದೂರು ನೀಡುತ್ತಾಳೆ.
ಬೆಳಿಗ್ಗೆ ಹೀಗಾಯಿತು ಎಂದು ಠಾಣೆಗೆ ತೆರಳಿದ್ದ ವಿದ್ಯಾರ್ಥಿನಿ, ಮದ್ಯಾಹ್ನದ ಹೊತ್ತಿಗೆ "ಇಲ್ಲ ಓದಲು ಇಷ್ಟವಿಲ್ಲವೆಂಬ ಕಾರಣಕ್ಕೆ ಈ ರೀತಿ ನಡೆದುಕೊಂಡಿರುವುದಾಗಿ ಹೇಳಿಕೆ ನೀಡಿ" ಬಂದಿದ್ದಳು. ಈ ರೀತಿ ವಿದ್ಯಾರ್ಥಿನಿ ನಡೆದುಕೊಂಡಿರುವುದು ಸತ್ಯವೇ ಆದರೆ, ಯಾಕೆ ಹೀಗೆ ನಡೆದುಕೊಂಡಳು ಎಂಬ ಗೊಂದಲವೂ ಉಂಟಾಗಿದೆ.
ಆದರೆ ವಿದ್ಯಾರ್ಥಿನಿಯ ಬೆತ್ತಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿದೆ ಎಂದು ಹುಡುಕಿದಾಗ ಆ ಹುಡುಗಿ ತನ್ನ ಮಾವನಿಗೆ ವಾಟ್ಸಪ್ ನಲ್ಲಿ ಕಳುಹಿಸಿರುವುದು ತಿಳಿದು ಬಂದಿದೆ. ಓದಲು ಇಷ್ಟವಿಲ್ಲದೆ ಕೆಲಸಕ್ಕೆ ಹೋಗಲು ಹುಡುಗಿ ಈ ರೀತಿ ನಡೆದುಕೊಂಡಿತಾ? ಅದಕ್ಕಾಗಿಯೇ ಠಾಣೆಯನ್ನ ಬಳಸಿಕೊಂಡಿತಾ? ಬ್ಲಾಕ್ ಮೇಲ್ ಗೆ ಒಳಗಾಯಿತಾ? ಹೀಗೆ ಹಲವು ಪ್ರಶ್ನೆಯೊಂದಿಗೆ ಈ ಪ್ರಕರಣ ದಾಖಲಾಗಿದೆ.