ಸುದ್ದಿಲೈವ್/ಶಿವಮೊಗ್ಗ
ಬೆಂಗಳೂರಿನ ಸ್ಪೂರ್ತಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಜಾನಪದ ಗಾಯಕ ಜೋಗಿಲ ಸಿದ್ದರಾಜು, ಅವಿರತ ಹರೀಶ್, ದರ್ಶನ್ ಬಳ್ಳೇಶ್ವರ, ಬಿ.ಟಿ.ಮಾನವ ಹಾಗೂ ಪಿ. ನಾಗೇಂದ್ರ ಇಗ್ಗಲೂರು ಅವರು ನಿರ್ಮಾಣ ಮಾಡುತ್ತಿರುವ 'ಅವಧೂತ 'ಚಿತ್ರದ ಕಲಾವಿದರ ಆಯ್ಕೆಗೆ ಇಂದು ನಗರದಲ್ಲಿ ಆಡಿಷನ್ ನಡೆಯಿತು.
ಕುವೆಂಪು ರಂಗಮಂದಿರ ಆವರಣದಲ್ಲಿ ನಡೆದ ಈ ಆಡಿಷನ್ ಪ್ರಕ್ರಿಯೆಗೆ ರಂಗ ಭೂಮಿಯ ಅನೇಕ ಹಿರಿ-ಕಿರಿಯ ಕಲಾವಿದರು ಭಾಗವಹಿಸಿದ್ದರು. ಆಡಿಷನ್ ಕುರಿತು ನಿರ್ದೇಶಕ ಗಂಧರ್ವ ರಾಯರಾವುತ ಮಾತನಾಡಿ, ಒಂದೇ ದಿನದಲ್ಲಿ ನಾವು ಕೊಟ್ಟ ಕರೆಗೆ ಸಾಕಷ್ಟು ಜನ ಕಲಾವಿದರು ಬಂದಿದ್ದಾರೆ. ಎಲ್ಲರೂ ಅನುಭವಿ ಕಲಾವಿದರೆ ಆಗಿದ್ದಾರೆ. ಅವರಲ್ಲಿ ನಾವು ಚಿತ್ರದ ಪಾತ್ರಗಳ ಬೇಡಿಕೆಗೆ ತಕ್ಕಂತೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಆ ಆಯ್ಕೆ ಪ್ರಕ್ರಿಯೆ ಸಂಜೆ ನಡೆಯಲಿದೆ ಎಂದರು.
ನಿರ್ಮಾಪಕ ಜೋಗಿಲ ಸಿದ್ದರಾಜು ಮಾತನಾಡಿ, ಶಿವಮೊಗ್ಗದಲ್ಲಿ ಕಲಾವಿದರಿಗೆ ಬರವಿಲ್ಲ ಎನ್ನುವುದು ನಮ್ಮ ಆಡಿಷನ್ ಮೂಲಕ ಸಾಬೀತು ಆಯಿತು. ಸಾಕಷ್ಟು ಜನರು ಕಲಾವಿದರು ನಮ್ಮ ಚಿತ್ರದ ಆಡಿಷನ್ ಗೆ ಬಂದಿದ್ದಾರೆ. ನಮಗೆ ಈಗ ಇರುವ ಸವಾಲು ಯಾರನ್ನು ಅಯ್ಕೆ ಮಾಡಿಕೊಳ್ಳಬೇಕು ಎನ್ನುವುದು. ಆದರೆ ನಮಗೆ ಪಾತ್ರಕ್ಕೆ ಅಗತ್ಯಕ್ಕೆ ತಕ್ಕಂತೆ ಅಭಿನಯ ಮಾಡುವ ಕಲಾವಿದರು ಬೇಕು. ಅದನ್ನೇ ಮನದಂಡವಾಗಿಟ್ಟುಕೊಂಡು ಕಲಾವಿದರ ಆಯ್ಕೆ ನಡೆಯಲಿದೆ ಎಂದರು. ಕಲಾವಿದರ ಆಯ್ಕೆ ನಂತರ ಚಿತ್ರ ತಂಡ ಬೆಂಗಳೂರಿಗೆ ತೆರಳಿಲಿ. ಜನವರಿ ೨೫ ರನಂತರ ಶಿವಮೊಗ್ಗ, ಹೊನ್ನಾಳಿ ಸುತ್ತಮುತ್ತ ಚಿತ್ರೀಕರಣ ನಡೆಸಲು ನಿರ್ಧರಿಸಿದೆ