ಎಸಿ ಸತ್ಯನಾರಾಯಣ ವಿರುದ್ಧ ಆರಂಭಗೊಂಡ ಪಾದಯಾತ್ರೆ, ಅರಸೀಕೆರೆ ತಲುಪಿದ ರೈತರ ಪ್ರತಿಭಟನೆ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಉಪವಿಭಾಗಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ರೈತ ಸಂಘಟನೆಯ ಹೋರಾಟ ಇಂದು ಅರಸೀಕೆರೆ ತಲುಪಿದೆ. 

ರಾಮೇನಕೊಪ್ಪದ ಸರ್ವೆ ನಂಬರ್ 57 ರ ರೈತರಿಗೆ ತಲಾ 4‌ ಎಕರೆ ಜಮೀನಿಗೆ ಆರ್ ಟಿಸಿ ಮಾಡಿಕೊಡಲು ಮೈಸೂರು ಲ್ಯಾಂಡ್ ರೆವೆನ್ಯೂ ಆಕ್ಟ್ ಪ್ರಕಾರ ಉಪವಿಭಾಗಾಧಿಕಾರಿಗಳ ಕೆಳಗೆ ವಿಚಾರಣೆ ನಡೆಸಲು ಬಾರದಿದ್ದರೂ ಎಸಿ ಸತ್ಯನಾರಾಯಣ್ ಅವರು ವಿಚಾರಿಸುವುದಾಗಿ ಹೇಳಿ ರೈತರನ್ನ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ರಾಮೇನಕೊಪ್ಪ ಗ್ರಾಮದ ರೈತ ಹೋರಾಟ ಸಮಿತಿ ದೂರಿದೆ.  

ಈ ಪ್ರಕರಣ ಆರ್ ಸಿ ನ್ಯಾಯಾಲಯದಲ್ಲಿ ಇತ್ಯಾರ್ಥವಾಗಿದೆ. ಆದರೆ ತಹಶೀಲ್ದಾರ್ ಅವರು ಉಪವಿಭಾಗಾಧಿಕಾರಿಗಳ ಲಾಗಿನ್ ಕೋರಿ  ಪತ್ರಬರೆದಿದ್ದಾರೆ. ಖುದ್ದು ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಖುದ್ದು ಮುಖ್ಯಮಂತ್ರಿಗಳಿಗೆ ಎರಡು ಬಾರಿ  ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿ ರೈತರು ನಿನ್ಬೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದು ಇಂದು ಅರಸೀಕೆರೆ ಪಟ್ಟಣವನ್ನ ತಲುಪಿದೆ. 


ಸೋಮವಾರದಂದು ಬೆಂಗಳೂರು ತಲುಪಲಿದ್ದು ವಿಧಾನ ಸೌಧದ ಎದರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ಅಲ್ಲೇ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿ ತಿಳಿಸಿದೆ. ಒಂದು ವೇಳೆ ನ್ಯಾಯ ಸಿಗದೆ ಇದ್ದರೆ ನಾವೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ. ನಮ್ಮ ಆತ್ಮಹತ್ಯೆಗೆ ಜಿಲ್ಲಾಡಳಿತ ಮತ್ತು ಎಸಿ ಸತ್ಯನಾರಾಯಣ ಅವರೇ ಕಾರಣ ಎಂದು ಸಮಿತಿ ಆರೋಪಿಸಿದೆ. ನಿನ್ನೆ ಆರಂಭಗೊಂಡ ಪ್ರತಿಭಟನೆಯ ವೇಳೆ ರೈತರೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close