ಸುದ್ದಿಲೈವ್/ಶಿವಮೊಗ್ಗ
ತಲೆಗೆ ತೀವ್ರಗಾಯಗೊಂಡು ಗವಟೂರಿನ ಕಾಡಿನ ಮಾರ್ಗದಲ್ಲಿ ಬಿದ್ದಿದ್ದ ಯುವಕನನ್ನ ರಾಜ್ಯ ಹೆದ್ದಾರಿ ಗಸ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸುವ ಮೂಲಕ ಕರ್ತವ್ಯ ಹಾಗೂ ಮಾನವೀಯತೆಯನ್ನ ಮೆರೆದಿದ್ದಾರೆ.
ಭಾಸ್ಕಾರ್ ಆಚಾರಿ (30) ಎಂಬ ಚಿಕ್ಕಜೇನಿ ನಿವಾಸಿ ರಿಪ್ಪನ್ ಪೇಟೆಯಿಂದ ಊರಿಗೆ ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಬಿದ್ದಿದ್ದಾನೆ. ಸ್ಥಳೀಯರ ಪ್ರಕಾರ ಆತ ಬೈಕ್ ನಿಂದ ಸ್ಕಿಡ್ ಆಗಿ ಬಿದ್ದು ತಲೆಗೆ ಗಾಯಮಾಡಿಕೊಂಡಿದ್ದಾನೆ ಎಂಬುದು ಅವರ ಮಾಹಿತಿಯಾಗಿದೆ.
ಈ ವೇಳೆ ಹೈವೆ ಗಸ್ತು ತಿರುತ್ತಿದ್ದ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ತಕ್ಷಣವೇ ಸ್ಥಳೀಯರನ್ನ ಕರೆದುಕೊಂಡ ಪೊಲೀಸರು ತಮ್ಮ ವಾಹನದಲ್ಲಿದ್ದ Firstaid ಕಿಟ್ ಬಳಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆದ್ದಾರಿ ಗಸ್ತುವಾಹನದಲ್ಲಿಯೇ ರಿಪ್ಪನ್ ಪೇಟೆ ಆರೋಗ್ಯ ಪ್ರಾಥಮಿಕ ಕೇಂದ್ರಕ್ಕೆ ಕರೆದುಕೊಂಡುಹೋಗಿದ್ದಾರೆ.
ಹೈವೆ ಗಸ್ತಿನಲ್ಲಿದ್ದ ಎಎಸ್ಐ ಗಣಪತಿ ರಾವ್, ಚಾಲಕ ಗಿರೀಶ್ ಎಂದು ಗುರುತಿಸಲಾಗಿದೆ. ಇದರಿಂದ ಕರ್ತವ್ಯ ಮತ್ತು ಮಾನವೀಯತೆ ಮೆರೆದಿದ್ದಾರೆ. ಗಾಯಾಳು ಸಧ್ಯಕ್ಕೆ ರಿಪ್ಪನ್ ಪೇಟೆಯಿಂದ ಮೆಗ್ಗಾನ್ ಗೆ ಶಿಫ್ಟ್ ಆಗಿದ್ದಾನೆ. ಸಧ್ಯಕ್ಕೆ ಭಾಸ್ಕಾರ್ ಆಚಾರಿ ಪ್ರಾಣಾಪಾಯದಿಂದ ಬಜಾವ್ ಆಗಿದ್ದಾನೆ.