ಸುದ್ದಿಲೈವ್/ಶಿವಮೊಗ್ಗ
ಕಮಿಷನ್, ಗ್ರ್ಯಾಚ್ಯುಟಿ, ಮೆಡಿಕ್ಲೈಮ್, ಸಣ್ಣ ಉಳಿತಾಯದ ಪ್ರೀಮಿಯಂ ರದ್ದುಗೊಳಿಸಿರುವುದು ಸೇರಿದಂತೆ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಸಾಂಕೇತಿಕ ಧರಣಿಯನ್ನ ಎಲ್ಐಸಿ ಏಜೆಂಟ್ ಅಸೋಸಿಯೇಷನ್ ಗೋಪಾಳದ ಎಲ್ಐಸಿ ವಿಭಾಗೀಯ ಕಚೇರಿಯ ಎದುರಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಎಲ್ಐಸಿಯ ವಿಭಾಗೀಯ ಕಚೇರಿಯು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಕಚೇರಿ ಒಳಗೊಂಡಿರುತ್ತದೆ. ಭಾರತೀಯ ಜೀವಾ ವಿಮಾನಿಗಮವು ಇತ್ತೀಚೆಗೆ ವ್ಯವಹಾರದಲ್ಲಿ ಮಾಡಿದ ಬದಲಾವಣೆಯಗಳಿಂದ ಎಲ್ಐಸಿ ಏಜೆಂಟ್ ವೃತ್ತಿಗೆ ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಗ್ರಾಹಕರ ಪಾಲಿಸಿ ಮೇಲಿನ ಜಿಎಸ್ ಟಿ ರದ್ದತಿ, ಪಾಲಿಸಿಗಳ ಮೇಲಿನ ಬೋನಸ್ ಹೆಚ್ಚಿಸುವಂತೆ, ಪಾಲಿಸಿ ಮೇಲಿನ ಪ್ರವೇಶದ ವಯಸ್ಸು 50-55 ಕ್ಕೆ ಹೆಚ್ಚಿಸುವಂತೆ, ಕಮಿಷನ್ ಹಿಂಪಡೆಯುವಿಕೆ, ಎಜೆಂಟರ ಕಮಿಷನ್ ಹಳೇ ಪದ್ಧತಿಯನ್ನ ಮುಂದುವರೆಸುವ ಬಗ್ಗೆ ಹಾಗೂ ಗ್ರಾಜ್ಯುಟಿ ಹೆಚ್ಚಿಸುವಂತೆ ಬೇಡಿಕೆಗಳನ್ನ ಇಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ.
ಲೀಯಾಫಿ ಸಂಘದ ವಿಭಾಗೀಯ ಅಧ್ಯಕ್ಷರಾದ ಎ.ವೀರೇಶಪ್ಪ, ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್, ಖಜಾಂಚಿ ರಘು, ಸಿಎಲ್ಐಎ ಅಧ್ಯಕ್ಷ ಮಂಜುನಾಥ್ ತೀರ್ಥಹಳ್ಳಿ, ಮಾಜಿ ಅಧ್ಯಕ್ಷ ಕೇಶವ ಮೂರ್ತಿ, ಪಿ.ಕೆನಾಗೇಶ್ ರಾವ್ ಮತ್ತು 3 ಜಿಲ್ಲೆಗಳ 14 ಶಾಖೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಭಾಗಿಯಾಗಿದ್ದರು.