ವಿಮಾನ ನಿಲ್ದಾಣದಲ್ಲಿ ತುರ್ತು ರಕ್ಷಣ ಕಾರ್ಯಗಳ ಅಣಕು ಪ್ರದರ್ಶನ


ಸುದ್ದಿಲೈವ್/ಶಿವಮೊಗ್ಗ

ಸೋಗಾನೆ ವಿಮಾನ ನಿಲ್ದಾಣದಲ್ಲಿ ಇವತ್ತು ರಕ್ಷಣ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಂದ ತುರ್ತು ಸಂದರ್ಭದ ರಕ್ಷಣ ಕಾರ್ಯಗಳ ಅಣಕು ಪ್ರದರ್ಶನ  ನಡೆಸಲಾಯಿತು. 

ಬೆಳಗ್ಗೆ 10.19ರ ಹೊತ್ತಿಗೆ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡದ ಅಣಕು ಪ್ರದರ್ಶನ ನಡೆಯಿತು. ವಿಮಾನವೊಂದು ಅಪಘಾತಕ್ಕೀಡಾದ ಸಂದರ್ಭವನ್ನ ಸೃಷ್ಟಿಸಿ ಎಟಿಸಿ, ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ ತುರ್ತಾಗಿ ರಕ್ಷಣಾ ಕಾರ್ಯಕ್ಕೆ ಧಾವಿಸುವ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವುದು, ಆರೋಗ್ಯ ಇಲಾಖೆ ಸಿಬ್ಬಂದಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡುವ ಕುರಿತು ಅಣಕು ಪ್ರದರ್ಶನ ನಡೆಸಲಾಯಿತು.

ವಿಮಾನ ನಿಲ್ದಾಣದ ನಿರ್ವಹಣೆ ಮಾಡುತ್ತಿರುವ ಕೆಎಸ್‌ಎಸ್‌ಐಡಿಸಿ, ಭದ್ರತಾ ಉಸ್ತುವಾರಿ ಹೊತ್ತಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್‌), ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು, ಸ್ಟಾರ್‌ ಏರ್‌, ಸ್ಪೈಸ್‌ ಜೆಟ್‌ ಮತ್ತು ಇಂಗೋ ವಿಮಾನಯಾನ ಸಿಬ್ಬಂದಿ ಅಣುಕ ಪ್ರದರ್ಶನದಲ್ಲಿ ಭಾಗವಹಿಸಿದ್ದರು. 

ಎಲ್ಲ ವಿಮಾನ ನಿಲ್ದಾಣದಲ್ಲಿ ವರ್ಷಕ್ಕೆ ಒಮ್ಮೆ ಇಂತಹ ಅಣಕು ಪ್ರದರ್ಶನ ಮಾಡಬೇಕು ಎಂಬ ನಿಯಮವಿದೆ. ಅಣಕು ಪ್ರದರ್ಶನದ ವರದಿಯನ್ನು ನಾಗರಿಕ ವಿಮಾಯಾನ ಪ್ರಾಧಿಕಾರಕ್ಕೆ (ಡಿಜಿಸಿಎ) ವರದಿ ಸಲ್ಲಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close