ಸಿಟಿ ರವಿಯನ್ನ ದತ್ತಪೀಠದ ದತ್ತಾತ್ರಿ ರಕ್ಷಿಸುತ್ತಾನೆ ಎಂದ ಶಾಸಕ ಚೆನ್ನಿ-ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ!



ಸುದ್ದಿಲೈವ್/ಶಿವಮೊಗ್ಗ

ಸಿಟಿ ರವಿಯವರನ್ನ ಅಮಾನುಷವಾಗಿ ನಡೆಸಿಕೊಂಡ ರಾಜ್ಯಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಇಂದು ಜಿಲ್ಲಾಧಿಕಾರಿ ಕಚೇರಿಯ ಎದುರು ಭರ್ಜರಿ ಪ್ರತಿಭಟನೆ ನಡೆಸಿದೆ. 

ಬಂಧಿಸಿ ಬಂಧಿಸಿ ಕಾಂಗ್ರೆಸ್ ಗೂಂಡಾಗಳಿಗೆ ಬಂಧಿಸಿ, ಸಿಟಿ ರವಿಯವರನ್ನ ಅಮಾನುಷವಾಗಿ ನಡೆಸಿಕೊಂಡ ಪೊಲೀಸ್ ಇಲಾಖೆಗೆ ದಿಕ್ಕಾರ, ಜಗ್ಗಲ್ಲ ಬಗ್ಗಲ್ಲ ಕೇಸ್ ಗೆಲ್ಲಾ ಹೆದರೊಲ್ಲ ಎಂಬ ಘೋಷಣೆಗಳನ್ನ ಕೂಗಲಾಯಿತು. 

ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಅಮಾನುಷವಾಗಿ ಸಿಟಿ ರವಿಯವರನ್ನ ಬಂಧಿಸುವುದಾದರೆ, ಸಂಸತ್ ನಲ್ಲಿ ನಡೆದುಕೊಂಡ ರಾಹುಲ್ ಗಾಂಧಿಯ ಬಗ್ಗೆ ಏನು ಮಾಡಬೇಕು ಎಂದು ಪ್ರಶ್ನಿಸಿದರು. 

ಹಿರಿಯ ಸಂಸದರನ್ನ ಅವಮಾನಿಸಿದ ಮಹಿಳಾ ಸಂಸದರೊಂದಿಗೆ ಅನುಚಿತವಾಗಿ ನಡೆದುಕೊಂಡ ರಾಹುಲ್ ಗಾಂಧಿಯನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ರಾಜ್ಯದಲ್ಲಿ ಸಿಟಿ ರವಿಯ ಬೆಳವಣಿಗೆಯನ್ನ ಸಹಿಸದ ಕಾಂಗ್ರೆಸ್ ನಿಯಂತ್ರಿಸಲು ಹೊರಟಿದೆ. ಸಭಾಪತಿಗಳು ಘಟನೆಯನ್ನ ಪರೀಕ್ಷಿಸಲಿ, ತಾಯಿಯಂದರ ಬಗ್ಗೆ ಅವಮಾನಿಸುವ ಮನಸ್ಥಿತಿ ರವಿಯವರದ್ದಲ್ಲ ಎಂದರು. 

ಮೂಡಾ, ವಾಲ್ಮೀಕಿ, ಬೋವಿ ನಿಗಮದ ಹಗರಣವನ್ನ‌ಬೇರೆಡೆ ಸೆಳೆಯಲು ಜಾಂಗ್ರೆಸ್ ಹೊರಟಿಸಿದೆ. ಬೆಳಗಾವಿ ಉತ್ತರದ ವಿಧಾನ ಸಭಾ ಕ್ಷೇತ್ರದ ಆಪ್ತ ಸಹಾಯಕ ಸದ್ದಾಂ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ  ಸಿಟಿರವಿ ಮೇಲೆ ದಾಳಿ ಮಾಡಲು ಯತ್ನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಒಬ್ಬ ಆರೋಪಿ, ಅವರನ್ನ ರಾಜ್ಯಪಾಲರು ಮಧ್ಯಪ್ರವೇಶಿಸಿ ಕ್ರಮ ಜರುಗಿಸಬೇಕು. ಸಿಟಿ ರವಿಯರನ್ನ ಅಮಾನುಷವಾಗಿ ನಡೆಸಿಕೊಂಡರೆ ಪರಿಣಮಾ ನೆಟ್ಟಗಿರಲ್ಲ. 

ಹಗರಣದಲ್ಲಿ ಮುಳುಗಿರುವ ರಾಜ್ಯ ಸರ್ಕಾರವನ್ನ ರಾಜ್ಯಪಾಲರು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. 

ಡಾ.ಸರ್ಜಿ ಮಾತು

ಎಂಎಲ್‌ಸಿ ಡಾ.ಧಜಯ ಸರ್ಜಿ ಮಾತನಾಡಿ,  ಪರಿಷತ್ ನಲ್ಲಿ ಕಾಂಗ್ರೆಸ್ ಗಾಂಧಿಜಿಯನ್ನ ತಮ್ಮ ಸ್ವತ್ತು ಎಂಬ ಲೆಕ್ಕಾಚಾರದಲ್ಲಿ ಮಾತನಾಡುತ್ತಾರೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ರನ್ನ ತನ್ನ ಆಸ್ತಿ ಎಂಬಂತೆ ವರ್ತಿಸುತ್ತಾರೆ. ಆದರೆ ದೇಶದಲ್ಲಿ 106 ಬಾರಿ ಸಂವಿದಾನ ಬದಲಾವಣೆ ಮಾಡಿರುವ ಹಾಗೂ ತುರ್ತುಪರಿಸ್ಥಿತಿಯನ್ನ ಹೇರಿದ ಕೀರ್ತಿ ಕಾಂಗ್ರೆಸ್ ಸಂವಿಧಾನ ರಕ್ಷಕರಂತೆ ಬಿಂಬಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ದೂರಿದೆ. 

ಚನ್ನಗಿರಿ, ಡಿಜೆಹಳ್ಳಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದವರನ್ನ, ವಾಲ್ಮೀಕಿ, ಮೂಡಾ ಹಗರಣದ ಆರೋಪಿಗಳನ್ನ ಬಂಧಿಸಲಾಗದ ರಾಜ್ಯ ಸರ್ಕಾರ ಷಂಡರಹಾಗೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 



ಶಾಸಕ ಚೆನ್ನಿ ಗುಡುಗು

ಶಾಸಕ ಚೆನ್ನಬಸಪ್ಪ ಮಾತನಾಡಿ, ಬೆಳಗಾವಿ ಅಧಿವಶಶನದಲ್ಲಿ ಪ್ರಜಾಪ್ರಭುತ್ವವನ್ನ ಹೇಗೆ ಹತ್ತಿಕ್ಕಲು ಸಾಧ್ಯವೆಂದು ಕಾಂಗ್ರೆಸ್ ಸಾಭೀತು ಪಡಿಸಿದೆ. ಸಿನಿಮಾದಲ್ಲಿ ಖಳನಾಯಕನನ್ನ ಮಾನಸಿಕವಾಗಿ ಕುಗ್ಗಿಸುತ್ತಾರೆ ಎಂಬುದನ್ನ ಸಿನಿಮಾದಲ್ಲಿ ನೋಡಿದ್ವಿ, ಶಾಸಕರೊಬ್ಬರನ್ನ ಪೊಲೀಸ್ ಇಲಾಖೆ ನಡೆಸಿಕೊಂಡಿರುವುದು ರಕ್ಷಣ ಇಲಾಖೆ ತಲೆತಗ್ಗಿಸುವಂತೆ ಮಾಡಿದೆ ಎಂದರು. 

ರವಿಯನ್ನ ಬಂಧಿಸುವ ಪ್ರಕ್ರಿಯೆ ನಡೆಯುತ್ತೆ. ದರೋಡೆಕೋರರನ್ನ ಬಂಧಿಸಿ ಎಂದರೆ ರಕ್ಷಣ ಇಲಾಖೆ ಅಮಾಯಕ ಶಾಸಕರನ್ನ‌ಬಂಧಿಸಿದೆ. ಸದ್ದಾಂ ಸಿಟಿ ರವಿಗೆ ಹೊಡೆಯಲು  ಕೈಎತ್ತಿದ್ದಾನೆ ಎಂದರೆ ಆತನ ಮನಸ್ಥಿತಿ ಅರ್ಥವಾಗುತ್ತದೆ. ರೌಡಿಗಳನ್ನ ಪಿಎ ಮಾಡಿಕೊಳ್ಳುವ ಸ್ಥಿತಿಬಂದಿದೆ. ಸಿಟಿ ರವಿ 40 ವರ್ಷದಿಂದ ರಾಜಕೀಯ ಕ್ಷೇತ್ರದಲ್ಲಿದ್ದಾರೆ. ಅವರ ಮೇಲೆ ಕೈಹಾಕುರುವ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಸಿಟಿ ರವಿ ಮಾತನಾಡಿದರೆ ದಾಖಲೆ ಬೇಕು. ಸಿಎಂ ಸಿದ್ದರಾಮಯ್ಯ ಪರಿಷತ್ ನಲ್ಲಿ ಸಿಟಿ ರವೆ ಮಾತನಾಡಿರುವ ಬಗ್ಗೆ  ದಾಖಲೆ ಇದೆ ಎಂದಿದ್ದಾರೆ. ಆದರೆ ಸಭಾಪತಿಗಳು ದಾಖಲೆ ಇಲ್ಲ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯನವರು ರಾಜಕೀಯ ಸ್ಪಷ್ಟವಾಗಿದೆ. ಆದರೆ ಸಭಾಪತಿಗಳು ಸತ್ಯ ಹೇಳಿದ್ದಾರೆ ಎಂದರು. 

ಸಿಟಿ ರವಿಯನ್ನೊಳಗೊಂಡ ದತ್ತಪೀಠ ಸತ್ಯಸಂಶೋಧನಾ ಸಮಿತಿ ಶಿವಮೊಗ್ಗಕ್ಕೆ ಬಂದಾಗ ಅಟ್ಯಾಕ್ ಮಾಡಲಾಗಿತ್ತು. ಸಿಟಿ ರವಿಯನ್ನ ರಕ್ಷಣೆಗೆ ದತ್ತಪೀಠದ ದತ್ತಾತ್ರೇಯ ಇದ್ದಾನೆ. ರವಿಯವರಿಗೆ ಮಹಿಳೆಯರಿಗೆ ಗೌರವ ಕೊಡುವ ಬಗ್ಗೆ ಗೊತ್ತಿದೆ. ಸಿಟಿ ರವಿ ಹತ್ತುಬಾರಿ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ವಿರುದ್ಧ ಅಶ್ಲೀಲಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪರಿಷತ್ ನಲ್ಲಿರುವ  ಭಾರತೀಶೆಟ್ಟಿಯವರು ರವಿ ಹೀಗೆ ಮಾತನಾಡಿಲ್ಲ ಎಂದಿದ್ದಾರೆ. ಇಲ್ಲಿ ಯಾರು ರಾಜಕೀಯ ಮಾಡ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದರು. 

ವಿಧಾನ ಸೌಧದಲ್ಲಿ ದೇಶದ್ರೋಹ ಘೋಷಣೆ ಕೂಗಲಾಗಿದೆ ಎಂದರೆ ಇಲ್ಲ ಎಂಬುವ ಕಾಂಗ್ರೆಸ್ ಪರಿಷತ್ ನಲ್ಲಿ ಸಿಟಿ ರವಿ ಅಶ್ಲೀಲ ಪದ ಬಳಕೆ ಮಾಡಲಿಲ್ಲ ಎಂದರೆ ಮಾಡಿದೆ ಎಂಬ ಹುಂಬತನ ತೋರಿಸುತ್ತದೆ. ತನಿಖೆ ಮಾಡುವ ಸೌಜನ್ಯವನ್ನೂ ತೋರಿಸುತ್ತಿಲ್ಲ. ಕಾಂಗ್ರೆಸ್ ಮಹಿಳಾ ಸಚಿವರನ್ನ‌ ಮುಂದೆ ಇಟ್ಟುಕೊಂಡು ಅವರನ್ನ ಅಪಮಾನ ಮಾಡುವ ಮೂಲಕ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. 


ಪ್ರತಿಭಟನೆಯಲ್ಲಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ, ಮಾಜಿ ಕಾರ್ಪರೇಟರ್ ಸುರೇಖಾ ಮುರುಳೀಧರ್, ಚಂದ್ರಶೇಖರ್, ಎಸ್ಸಿ ಮೋರ್ಚಾದ ಅಧ್ಯಕ್ಷ ಹರೀಶ್ ಮೊದಲಾದವರು ಭಾಗಿಯಾಗಿದ್ದರು.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close