ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಪಾರ್ಕ್ ಎಕ್ಸ್ಟೆನ್ಷನ್ ನಲ್ಲಿರುವ ಸರ್ಜಿ ತಾಯಿ ಮತ್ತು ಮಗು ಆಸ್ಪತ್ರೆಯನ್ನ ಡಿಜಿಟಲೈಜೇಷನ್ ಮಾಡಲಾಗುತ್ತಿದೆ. ಮದ್ಯ ಕರ್ನಾಟಕದಲ್ಲಿ ಡಿಜಿಟಲೈಜೇಷನ್ ಆಗುತ್ತಿರುವ ಪ್ರಥಮ ಆಸ್ಪತ್ರೆಯ ಹೆಗ್ಗಳಿಕೆಗೆ ಆಸ್ಪತ್ರೆ ಪಾತ್ರವಾಗಿದೆ ಎಂದು ಎಂಎಲ್ ಸಿ ಡಾ.ಧನಂಜಯ ಸರ್ಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಸರ್ಜಿ, ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಪ್ರತಿ ವರ್ಷ 3 ಟನ್ ಪೇಪರ್ ಬಳಕೆ ಆಗುತ್ತಿದೆ. 3 ಟನ್ ಪೇಪರ್ ಬಳಕೆಗೆ 75 ಮರಗಳ ಕಡಿತಲೆಯಾಗುತ್ತಿವೆ. ದೇಶದಲ್ಲಿ 40 ಲಕ್ಷ ಟನ್ ಪೇಪರ್ ಉತ್ಪಾದನೆ ಆಗುತ್ತಿದೆ. ಪ್ರತಿ ಎರಡು ನಿಮಿಷಕ್ಕೆ ಮರಗಳ ಹೋಮ ನಡೆಯಲಿದೆ. ಇದನ್ನ ಆಸ್ಪತ್ರೆ ತಗ್ಗಿಸಿದೆ.
ಪ್ರಕೃತಿ ಹಾನಿ, ಮರಗಳ ಕಡಿತಲೆ, ವಾಯುಮಾಲಿನ್ಯ ಮತ್ತು ನೀರಿನ ಮಾಲಿನ್ಯವಾಗುತ್ತಿದೆ. ಆಸ್ಪತ್ರೆಗೆ 10 ಲಕ್ಷ ಪ್ರತಿ ವರ್ಷ ಕಾಗದದ ಬಳಕೆಯಾಗುತ್ತಿತ್ತು. ಇದನ್ನ ತಗ್ಗಿಸಿದೆ. ಲ್ಯಾಬ್ ನಲ್ಲಿ ಬಿಲಿಂಗ್, ಮೆಡಿಸಿನ್ ಬಿಲ್ಲಿಂಗ್ ಮೊದಲಾದ ಬಿಲ್ಲಿಂಗ್ ನ್ನ ಏಕಕಾಲದಲ್ಲಿ ಎಂಟ್ರಿ ಆಗುವುದರಿಂದ ನರ್ಸಿಂಗ್ ನವರ ಓಡಾಟವನ್ನ ತಗ್ಗಿಸಿದೆ.
ಆಸ್ಪತ್ರೆಯಲ್ಲಿ ಬೆಳಿಗ್ಗೆ ಡಿಸ್ಚಾರ್ಜ್ ಎಂದು ಹೇಳಿದರೆ ಸಂಜೆ ರೋಗಿ ಮನೆಗೆ ಹೋಗುತ್ತಿದ್ದರು. ಬಿಲಿಂಗ್ ಸೆಕ್ಷನ್ ಗಳ ಸ್ಪಷ್ಟೀಕರಣದ ಪತ್ರ ಲಭಿಸುವ ಗೋಜನ್ನ ತಪ್ಪಿಸಲಾಗಿದೆ. ಡಿಜಿಟಲೈಜೇಷನ್ ಮಾಡುವ ಮೂಲಕ ಈ ಎಲ್ಲ ಸಮಸ್ಯೆಗಳನ್ನ ತಪದಪುಸಲಾಗಿದೆ ಎಂದರು.