ಜ.18 ರಂದು ಶಿವಮೊಗ್ಗಕ್ಕೆ ಕೇಂದ್ರ ಕೃಷಿ ಸಚಿವ

Agriculture Minister Shivraj Singh Chauhan, a five-time Member of Parliament, four-time CM of Madhya Pradesh, and sixth-time MP Shivraj Singh Chauhan will arrive on January 18.


ಸುದ್ದಿಲೈವ್/ಶಿವಮೊಗ್ಗ

ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಐದು ಬಾರಿ ಸಂಸತ್ ಸದಸ್ಯರಾಗಿ, ನಾಲ್ಕು ಬಾರಿ ಮದ್ಯಪ್ರದೇಶದ ಸಿಎಂ ಆಗಿ, ಆರನೇ ಬಾರಿಗೆ ಸಂಸದರಾದ ಶಿವರಾಜ್ ಸಿಂಗ್ ಚೌಹಾಣ್ ಜ.18 ರಂದು ಆಗಮಿಸಲಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ ಅಂದು ಬೆಳಿಗ್ಗೆ 9-30 ಗಂಟೆಗೆ ಶಿವಮೊಗ್ಗದ ಪ್ರೇರಣಾ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗಲಿದ್ದು ಮಲೆನಾಡ ಸ್ಟಾರ್ಟ್ ಅಪ್ ಸಮ್ಮೇಳನ 2025 ರಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 

11 ಗಂಟೆಗೆ ಸಾಗರದ ಸಂತೆಮೈದಾನದಲ್ಲಿ ಅಡಿಕೆ ಬೆಳೆಗಾರರ ಬೃಹತ್ ಕೃಷಿ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ವಿದೇಶ ಅಡಿಕೆ ಆಮದು, ಪರಿಹಾರ, ಈ ವೇಳೆ ಅಡಿಕೆ ಬೆಳೆಗಾರರು ವನ್ಯ ಜೀವಿಗಳ ಹಾವಳಿ ತಪ್ಪಿಸಲು ಒತ್ತಾಯ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಡಬ್ಲುಹೆಚ್ ಒ ವರದಿ ನೀಡಿದ್ದು ಸಿಗರೇಟ್ ಲಾಬಿಯಿಂದ ಈ ವರದಿ ಹೊರಗೆ ಬಿದ್ದಿರುವ ಶಂಕೆಯಿದೆ. ಹಾಗಾಗಿ ನುರಿತ ವಿಜ್ಞಾನಿಗಳ ತಂಡ ರಚಿಸಬೇಕು. ಅದಕ್ಕೆ ಬಜೆಟ್ ನೀಡಿ ಅಡಿಕೆ ಸಂಶೋಧನೆ ನಡೆಸಲು ಒತ್ತಾಯ ಮಾಡಲಾಗುತ್ತದೆ ಎಂದರು. 

ಅಡಿಕೆಗೆ ಎಲೆಚುಕ್ಕಿ ರೋಗ ದೊಡ್ಡಪ್ರಮಾಣದಲ್ಲಿ ಎದುರಿಸಲಾಗುತ್ತಿದೆ. ಇದರಿಂದ ಸಾಕಷ್ಟು ಮಲೆನಾಡಿನಲ್ಲಿ ರೈತ ಸಂಕಷ್ಟಕ್ಕೊಳಗಾಗಿದ್ದ. ಆ ವೇಳೆ ಕೇಂದ್ರದಿಂದ ಪರಿಹಾರದ ರೂಪದಲ್ಲಿ  ಹಣ ನೀಡಲು ಒತ್ತಾಯಿಸಲಾಗಿತ್ತು. ಇದಕ್ಕೆ ಸಚಿವರಿಂದ ಉತ್ತರವನ್ನ ನಿರೀಕ್ಷಿಸಲಾಗಿದೆ. ಸಂಶೋಧನ ಕೇಂದ್ರ ಆರಂಭಿಸುವ ಒತ್ತಯ ಮಾಡಲಾಗುವುದು ಎಂದರು. 

ಅಡಿಕೆ ತೇವಾಂಶ 7% ಇರಲು ಇಲಾಖೆ ಹೇಳುತ್ತಿದೆ. ಆದರೆ ಇದು ಸಾಧ್ಯವಾಗುತ್ತಿಲ್ಲ. ತೇವಾಂಶವನ್ನ ಹೆಚ್ಚಿಸಲು ಒತ್ತಾಯ ಮಾಡಲಾಗುವುದು. ಮಲೆನಾಡಿನ ಅಡಿಕೆಯನ್ನ ರಪ್ತಿಗೆ ಒತ್ತಾಯಿಸಲಾಗುವುದು. ಹೊರ ರಾಷ್ಟ್ರಗಳಿಂದ ಅಡಿಕೆ ಆಮದಿಗೆ ತೆರಿಗೆ ಹೆಚ್ಚಿಸಲು ಒತ್ತಾಯ ಮಾಡಲಾಗುತ್ತಿದೆ ಎಂದರು. 

ಕಾಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಆರಗ ಜ್ಞಾನೇಂದ್ರ, ಡಾ. ಆರ್ ಎಂ ಮಂಜುನಾಥ್ ಗೌಡ, ಮಾಜಿ ಸಚಿವ ಹೆಚ್ ಹಾಲಪ್ಪ, ಮೊದಲಾದವರು ಭಾಗಿಯಾಗಲಿದ್ದಾರೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close