A complaint has been registered at the Bhadravati New Police Station that a married woman fell in love while working in a garment factory in Machenahalli and went missing after marrying the girl she loved.
ಸುದ್ದಿಲೈವ್/ಭದ್ರಾವತಿ
ಮಾಚೇನಹಳ್ಳಿಯ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪ್ರೀತಿ ಉಂಟಾಗಿದ್ದು, ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಿದ್ದರೂ ಪ್ರೀತಿಸಿದವನಿಗೆ ಕೈಕೊಟ್ಟು ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವುದು ಭದ್ರಾವತಿ ನ್ಯೂ ಪೊಲೀಸ್ ಠಾಣೆಯಲ್ಲಿ ದೂರಾಗಿ ದಾಖಲಾಗಿದೆ.
ಮಾಚೇನಹಳ್ಳಿಯಲ್ಲಿ 6 ವರ್ಷಗಳ ಹಿಂದೆ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ 27 ವರ್ಷದ ಯುವತಿ ಪರಿಚಯವಾಗಿತ್ತು. ಪರಿಚಯ ಪ್ರೀತಿಯಲ್ಲಿ ತಿರುಗಿ ನಂತರ ಮದುವೆಯಾಗಿತ್ತು. ಇವೆಲಗಲದರ ನಡುವೆ ಯುವಕನ ತಂದೆ ತಾಯಿಯರು ಮೃತಪಟ್ಟಿರುತ್ತಾರೆ.
ಬೊಮ್ಮನ್ ಕಟ್ಟೆಯಿಂಂದ ಜೇಡಿಕಟ್ಟೆಗೆ ಶಿಫ್ಟ್ ಆದ ಯುವ ಜೋಡಿ ಜೇಡಿಕಟ್ಟೆಯಲ್ಲಿದ್ದ ಅಡಿಕೆ ಫ್ಯಾಕ್ಟರಿಯಲ್ಲಿ ಒಂದು ವರ್ಷದ ಹಿಂದೆ ಪತ್ನಿ ಕೆಲಸಕ್ಕೆ ಹೋಗುತ್ತಿದ್ದು ಗಂಡ ಹೆಂಡತಿ ಇಬ್ಬರೂ ಅನೂನ್ಯವಾಗಿದ್ದರು. ಎರಡು ತಿಂಗಳ ಹಿಂದೆ ಪತ್ನಿಗೆ ಅಪರಿಚಿತ ನಂಬರ್ ನಿಂದ ಕರೆ ಬಂದಿದ್ದು ಇದರ ಬಗ್ಗೆ ಇಬ್ಬರ ನಡುವೆ ಮನಸ್ಥಾಪ ಉಙಟಾಗಿತ್ತು. ನಂತರವೂ ಸಂಬಾಳಿಸಿಕೊಂಡು ಹೋಗಿದ್ದರು.
ಆದರೆ ಇತ್ತೀಚೆಗೆ ಕೆಲಸದ ಮೇಲೆ ಪತಿ ಬೆಂಗಳೂರಿಗೆ ಹೋದಾಗ ಪತ್ನಿಯ ಮೊಬೈಲ್ ಸ್ವಿಚ್ ಆಫ್ ಬಂದಿದೆ. ತಕ್ಷಣವೇ ಮನೆಗೆ ಬಂದು ನೋಡಿದಾಗ ಮನೆಗೆ ಹಾಕಿದ ಕೀ ಮುಂಬಾದಲ್ಲಿ ಬಿದ್ದಿದ್ದು 27 ವರ್ಷದ ಪತ್ನಿಮಾತ್ರ ಇರಲಿಲ್ಲ ಇದರಿಂದ ಗಾಬರಿಗೊಂಡ ಪತಿ ನ್ಯೂಟೌನ್ ಠಾಣೆಗೆ ದೂರು ದಾಖಲಿಸಿದ್ದಾರೆ.