ಸವಳಂಗ ರಸ್ತೆಯಲ್ಲಿ ಗಂಡಸಿನ ಶವ ಪತ್ತೆ


A dead body of a man was found near a school on the outskirts of Shimoga. This body is said to be that of a laborer from Honnali

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಹೊರಭಾಗದಲ್ಲಿ ಶಾಲೆಯೊಂದ ಬಳಿ ಗಂಡಸಿನ ಶವವೊಂದು ಪತ್ತೆಯಾಗಿದೆ. ಈ ಶವ ಹೊನ್ನಾಳಿಯಿಂದ ಬಂದ ಕೂಲಿ ಕಾರ್ಮಿಕನದ್ದು ಎಂದು ಹೇಳಲಾಗುತ್ತಿದೆ. 

ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಜ್ಞಾನ ಸಾಗರ ಶಾಲೆಯ ಬಳಿ ಗಂಡಸಿನ ಶವವೊಂದು ಪತ್ತೆಯಾಗಿದ್ದು, ಹೊನ್ನಾಳಿಯಿಂದ ಬಂದ ವ್ಯಕ್ತಿಯ ಶವ ಇರಬಹುದು ಎಂದು ಶಂಕಿಸಲಾಗಿದೆ. 

ಹಳದಪ್ಪ ಎಂಬ 35 ವರ್ಷದ ವ್ಯಕ್ತಿ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನವನಾಗಿದ್ದು ಕೂಲಿಕೆಲಸಕ್ಕಾಗಿ ಶಿವಮೊಗ್ಗಕ್ಕೆ  ಬಂದಿದ್ದನು. ಆದರೆ ಈತ ಇಂದು ಮಧ್ಯಾಹ್ನ ಶವವಾಗಿ ಪತ್ತೆಯಾಗಿದ್ದಾನೆ. 

ಈತನ ಮೃತ ದೇಹದ ಬಗ್ಗೆ ಹಲವು ಅನುನಾನಗಳು ಏನೂ ಕೇಳಿ ಬರುತ್ತಿಲ್ಲ. ಮದ್ಯವ್ಯಸನಿಯಾಗಿದ್ದ ಹಳದಪ್ಪ ಸಾವನ್ನಪಿರಬಹುದು ಎಂದು ಹೇಳಲಾಗುತ್ತಿದೆ. 

ಮೃತನ ಕುಟುಂಬ ಹೊನ್ನಾಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದು ಮುಂದಿನ ವಿಚಾರಗಳೇನು ಎಂಬುದು ತಿಳಿದು ಬರಬೇಕಿದೆ. ಶಿವಮೊಗ್ಗದ ಗ್ರಾಮಾಂತರ ಪೊಲಿಸರು ಸ್ಥಳಕ್ಕೆ ಭೇಟಿ ನಿಡಿ ಮುಂದಿನ ಕ್ರಮ ಜರುಗಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close