ಭದ್ರಾವತಿಯಲ್ಲಿ ಪತ್ತೆಯಾಗಿದ್ದು ಗೋಮಾಂಸನೇನಾ? ಪೊಲೀಸ್ ಇಲಾಖೆ ಹೇಳೋದೇನು? ಹಿಂದೂ ಸಂಘಟನೆ ಹೇಳೇದ್ದೇನು?

There is confusion as to what is happening in Bhadravati. On the one hand, Hindu organizations placed the beef on the inspector's table of the police station and said that it was brought from Anwar Colony and raided the beef stall, but the station inspector who conducted the inspection said that it was not a beef stall, which is far from the truth.

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯಲ್ಲಿ ಏನು ನಡೆಯುತ್ತಿದೆ ಎಂಬುದು ಗೊಂದಲ ಉಂಟಾಗಿದೆ. ಒಂದೆಡೆ ಹಿಂದೂ ಸಂಘಟನೆಗಳು ಗೋಮಾಂಸವನ್ನ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಟೇಬಲ್ ಮೇಲೆ ಇಟ್ಟು ಇದು ಅನ್ವರ್ ಕಾಲೋನಿಯಿಂದ ತಂದಿದ್ದು ಗೋಮಾಂಸ ಅಡ್ಡೆಯನ್ನ ರೈಡ್ ಮಾಡಿ ಎಂದು ಹೇಳಿದರೂ ತಪಸಣೆ ನಡೆಸಿದ ಠಾಣೆಯವರು ಇದು ಗೋಮಾಂಸ ಅಡ್ಡೆ ಅಲ್ಲ ಎಂದು ಹೇಳಿರುವುದು ಸತ್ಯಕ್ಕೆ ದೂರವೆಂದು ಆರೋಪಿಸಿದ್ದಾರೆ. 

ಇನ್ನೊಂದೆಡೆ ಪೊಲೀಸ್ ಇಲಾಖೆ ಇದು ಗೋಮಾಂಸವಲ್ಲ ಎಂದು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ. 

ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗೋಹತ್ಯೆ ಮಾಡಿ ಗೋಮಾಂಸವನ್ನು ಮಾರುತ್ತಿದ್ದಾರೆಂದು ನೀಡಿದ ದೂರಿನ ಮೇರೆಗೆ ಹಳೇನಗರ ಪೊಲೀಸ್ ಠಾಣೆಯಲ್ಲಿ The Karnataka Prevention of Slaughter and Preservation of CATTLE Act- 2020 ರೀತ್ಯಾ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

ದೂರು ಬಂದ ತಕ್ಷಣವೇ ಸದರಿ ಘಟನೆಗೆ ಸಂಭಂದಿಸಿದಂತೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರೂ ಸಹಾ  ಹಳೆನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಸಹಾ ಪ್ರಕರಣ ದಾಖಲಿಸಿರುವುದಿಲ್ಲ ಎಂಬ ಸುಳ್ಳು ಮಾಹಿತಿಯುಳ್ಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿರುತ್ತದೆ. ಸಾರ್ವಜನಿಕರು ಈ ರೀತಿಯ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬಾರದು  ಹಾಗೂ ಸತ್ಯಾಸತ್ಯತೆಗಳ ಬಗ್ಗೆ ತಿಳಿಯದೆ, ಸುಳ್ಳು ಮಾಹಿತಿಗಳನ್ನು ಫಾರ್ವರ್ಡ್ ಮಾಡಬೇಡಿ ಎಂದು ಇಲಾಖೆ ಸ್ಪಷ್ಟನೆ ನೀಡಿದೆ. 

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿ ಹರಿಬಿಡುವುದು ಕಾನೂನು ರೀತ್ಯಾ ಅಪರಾಧವಾಗಿದ್ದು, ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಪತ್ರಿಕಾ ಹೇಳಿಕೆ ನೀಡಿದೆ. 

ನಾಳೆ ಎಸ್ಪಿಗೆ ಮನವಿ-ದೇವರಾಜ್ ಅರಳಹಳ್ಳಿ


ಆದರೆ ಹಿಂದೂ ಸಂಘಟನೆಗಳು ಈ ಘಟನೆಯನ್ನ ತೀವ್ರವಾಗಿ ಖಂಡಿಸಿದೆ. ಗೋಮಾಂಸವನ್ನ ಠಾಣೆ ಪಿಎಸ್ಐ ಟೇಬಲ್ ಮೇಲೆ ಇಟ್ಟು ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಾವತಿ ನಗರದ ಅನ್ವರ್ ಕಾಲೋನಿಯ ವಾಗಿ ಟಾಕೀಸ್ ಪಕ್ಕದ ಬಸ್ ಸ್ಟಾಂಡ್ ಎದುರು ರಸ್ತೆಯಲ್ಲಿ ಇರುವ ಎರಡು ಮನೆಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಗೋ ಹತ್ಯೆ ಮಾಡಿ ಗೋಮಾಂಸವನ್ನು ಮಾರುತ್ತಿದ್ದಾರೆ. 

ಸ್ಥಳದ ಲೋಕೇಶನ್ ಅನ್ನು ತಮ್ಮ ಸರ್ಕಾರಿ ವಾಟ್ಸಪ್‌ ಸಂಖ್ಯೆಗೆ ಸರಿಯಾಗಿ ಬೆಳಗ್ಗೆ 10 ಗಂಟೆಗೆ ಕಳುಹಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತಾವುಗಳು ದಾಳಿ ನಡೆಸಿ ಅಕ್ರಮ ಗೋಮಾಂಸದ ಮಾರುತ್ತಿರುವವರ ಆ ಮನೆಯ ಸ್ಥಳದ ಮೇಲೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿ ಬಂಧಕ ಮತ್ತು ಸಂರಕ್ಷಣಾ ಅಧಿನಿಯಮ, 2020 ರಂತೆ ಕಾನೂನು ಕ್ರಮ ಜರುಗಿಸಬೇಕಾಗಿ ಕೇಳಲಾಗಿತ್ತು. ಆದರೆ ವಿನಂತಿಸಿದ ಅರ್ಧ ಗಂಟೆಗೆ ಠಾಣೆ ಸಿಬ್ಬಂದಿಗಳು ಹೋಗಿ ತಪಾಸಣೆ ಮಾಡಿ ಬಂದವರು ಒಂದು ಖಾಲಿ ಅಂಗಡಿ ಮತ್ತೊಂದು ಚಿಕನ್ ಅಂಗಡಿ ಎಂದು ಮಾಹಿತಿ ನೀಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದೆ.

ಈ ಕುರಿತು ನಾಳೆ ಎಸ್ಪಿ ಕಚೇರಿಗೆ ತೆರಳಿ ಭದ್ರಾವತಿಯಲ್ಲಿ ನಡೆಯುತ್ತಿರುವ ಗೋಮಾಂಸ ಮಾರಾಟದ ಬಗ್ಗೆ ಆಗ್ರಹದ ಪತ್ರ ನೀಡುವುದಾಗಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ದೇವರಾಜ್ ಸುದ್ದಿಲೈವ್ ಗೆ ತಿಳಿಸಿದ್ದಾರೆ.  ಒಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತು ಹಿಂದೂ ಸಂಘಟನೆಗಳ ನಡುವಿನ ಜಟಾಪಟಿ ಭದ್ರಾವತಿಯಲ್ಲಿ ಮುಂದು ವರೆದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close