An incident has been reported where two men on a bike stabbed a man selling kachori near Murudeshwar temple on Kastura Ba Road and fled.
ಸುದ್ದಿಲೈವ್/ಶಿವಮೊಗ್ಗ
ಕಸ್ತೂರ ಬಾ ರಸ್ತೆ ಮುರುಡೇಶ್ವರ ದೇವಸ್ಥಾನದ ಬಳಿ ಕಚೋರಿ ಮಾರುತ್ತಿದ್ದ ವ್ಯಕ್ತಿಗೆ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಕಸ್ತೂರ ಬಾ ರಸ್ತೆಯ ಮುರುಡೇಶ್ವರ ದೇವಸ್ಥಾನದ ಬಳಿ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಚೋರಿ ಮಾರಾಟ ಮಾಡುವ ವ್ಯಕ್ತಿಗೆ ವಿಳಾಸ ಕೇಳಿದ್ದಾರೆ. ವಿಳಾಸ ಹೇಳಿದ ಕಚೋರಿ ಮಾರುವ ವ್ಯಕ್ತಿಗೆ ವಾಪಾಸ್ ಬೈಕ್ ನಲ್ಲಿ ಬಂದವರಿಂದ ಚಾಕು ಇರಿದು ಪರಾರಿಯಾಗಿದ್ದಾರೆ.
ಕಾರಣ ಇಷ್ಟೆ, ವಿಳಾಸ ಹೇಳಿದ ಕಚೋರಿ ಮಾರಾಟಗಾರ ತಪ್ಪು ವಿಳಾಸ ತಿಳಿಸಿದ್ದಾನೆ. ಆತ ಹೇಳಿದ ವಿಳಾಸದಲ್ಲಿ ಬಾಗಿಲು ಹಾಕಿದೆ ಎಂಬ ಕಾರಣ ತಿಳಿದು ಬಂದಿದೆ. ಬೈಕ್ ನಲ್ಲಿ ಬಂದವರು ಕೋಟೆ ಗಂಗೂರಿನ ವ್ಯಕ್ತಿಗಳು ಎಂದು ತಿಳಿದು ಬಂದಿದೆ.